ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೆಲಸ ಕೇಳಿಕೊಂಡು ಹೋದ ವಿದ್ಯಾರಣ್ಯಪುರಂ ನಿವಾಸಿ ನಾಪತ್ತೆ

Rashmi Kasaragodu
Updated On : 15 Jun 2014, 1:01 am

ಮೈಸೂರು: ವಿದ್ಯಾರಣ್ಯಪುರಂ ನಿವಾಸಿ ಲೇ.ಲಕ್ಷ್ಮಣ ಮೊದಲಿಯಾರ್ ಎಂಬವರ ಪುತ್ರ ಕೃಷ್ಣ (50) ನಾಪತ್ತೆಯಾಗಿದ್ದಾರೆ. ಕಾರ್ಪೆಂಟರ್ ಕೆಲಸ ಮಾಡಿಕೊಂಡಿರುವ ಕೃಷ್ಣ, ಎರಡು ತಿಂಗಳಿಂದ ಮನೆಯಲ್ಲೇ ಇದ್ದರು. ಮೇ 26 ರಂದು ಕೆಲಸ ಕೇಳಿಕೊಂಡು ಬರಲು ಹೋದವರು ನಾಪತ್ತೆಯಾಗಿದ್ದಾರೆ ಎಂದು ಕೃಷ್ಣ ಪತ್ನಿ ಶೋಭಾ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ಎಡತೋಳಿನಲ್ಲಿ ಕಣ್ಣಮ್ಮ ಲಕ್ಷ್ಮಣ ಎಂಬ ಹಚ್ಚೆ ಇದೆ. ಎಡಗೈನ 1 ಬೆರಳು ಸ್ವಲ್ಪ ತುಂಡಾಗಿದೆ. ಕನ್ನಡ ಮತ್ತು ತಮಿಳು ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.0821- 2418322, 522 ಸಂಪರ್ಕಿಸಲು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಕೋರಿದ್ದಾರೆ.


 ಬೃಂದಾವನ ಬಡಾವಣೆ
ಮೇಟಗಳ್ಳಿಯಲ್ಲಿ ನಾಯಿ ಹಾವಳಿ


ಮೈಸೂರು: ನಗರದ ಬೃಂದಾವನ ಬಡಾವಣೆ ಹಾಗೂ ಮೇಟಗಳ್ಳಿಯಲ್ಲಿ ಇತ್ತೀಚೆಗೆ ಬೀದಿಗಳ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ. ಸಾರ್ವಜನಿಕರು ರಸ್ತೆಯಲ್ಲಿ ತಿರುಗಾಡಲು ಭಯಗೊಂಡಿದ್ದು, ದ್ವಿಚಕ್ರ ವಾಹನದಲ್ಲಿ ತೆರಳುವವರನ್ನು ನಾಯಿಗಳು ಅಟ್ಟಿಸಿಕೊಂಡು ಹೋಗುತ್ತಿವೆ. ಇದರಿಂದ ವಾಹನ ಸವಾರರು ಗಾಬರಿಗೊಂಡು ಬಿದ್ದು, ಮೈಮೂಳೆ ಮುರಿದುಕೊಂಡವರಿಗೆ ಲೆಕ್ಕವೇ ಇಲ್ಲ. ಮಹಿಳೆಯರು ಮತ್ತು ಮಕ್ಕಳು ರಾತ್ರಿ ವೇಳೆ ತಿರುಗಾಡಲು ಭಯ ಪಡುತ್ತಿದ್ದಾರೆ. ಅಲ್ಲದೆ ಬೆಳಗಿನ ಜಾವ ವಾಯುವಿಹಾರಕ್ಕೆ ತೆರಳುವವರನ್ನು ಬಿಡುವುದಿಲ್ಲ. ಅದರಲ್ಲೂ ಬೃಂದಾವನ ಬಡಾವಣೆಯ ಗಣಪತಿ ದೇವಸ್ಥಾನದ ಸುತ್ತಮುತ್ತ ಹಾಗೂ ಅಂಗಡಿಗಳ ಬಳಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement