ರೇಲ್ವೆ ಬಜೆಟ್, ಕಾದು ನೋಡಿ: ರೇಲ್ವೆ ಸಚಿವ ಸದಾನಂದ ಗೌಡ
ತುಮಕೂರು: ತಾವು ಮಂಡಿಸುವ ರೈಲ್ವೆ ಬಜೆಟ್ನಲ್ಲಿ ಏನಿರುತ್ತೆ, ಹೇಗಿರುತ್ತೆ ಎಂಬುದರ ಬಗ್ಗೆ ಕಾದು ನೋಡಿ ಎಂದು ರೈಲ್ವೆ ಸಚಿವ ಡಿ. ವಿ. ಸದಾನಂದಗೌಡ ತಿಳಿಸಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆ ಯೋಜನೆಗಳ ಕುರಿತಂತೆ ಯಾವುದೇ ಸುಳಿವನ್ನು ನೀಡಲು ನಿರಾಕರಿಸಿ, ಬಜೆಟ್ವರೆಗೂ ಕಾದು ನೋಡಿ ಎಂದರು. ಪ್ರಧಾನಿ ನರೇಂದ್ರ ಮೋದಿ ತಮಗೆ ವಿಶೇಷ ಜವಾಬ್ದಾರಿ ನೀಡಿದ್ದಾರೆ. ಇದರ ಅರಿವು ತಮಗಿದೆ. ಮೋದಿ ಭವಿಷ್ಯದ ಭಾರತ ಕಲ್ಪನೆ ಆಧರಿಸಿ ಜನರ ಆಶೋತ್ತರಗಳಿಗೆ ಅನುಗುಣವಾಗಿ ಕೆಲಸ ಮಾಡುವುದಾಗಿ ತಿಳಿಸಿದರು. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಅವಶ್ಯಕತೆ ಇಲ್ಲ. ಕಾವೇರಿ ಮಧ್ಯಂತರ ತೀರ್ಪು ಸುಪ್ರೀಂಕೋರ್ಟ್ನಲ್ಲಿ ಬಾಕಿ ಇದ್ದು ಮೂಲದಾವೆ ಜತೆ ವಿಚಾರಣೆಗೆ ಬರುತ್ತದೆ ಎಂದು ಸದಾನಂದಗೌಡ ತಿಳಿಸಿದರು.