ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದೇಗುಲಗಳಿಂದ ಜನರ ಬದುಕಿನಲ್ಲಿ ನೆಮ್ಮದಿ

Mainashree
Updated On : 18 Jun 2014, 10:34 am

ನರಸೀಪುರ: ದೇವಾಲಯಗಳಂತಹ ಧಾರ್ಮಿಕ ಕೇಂದ್ರಗಳಿಂದ ಗ್ರಾಮೀಣ ಜನರ ಬದುಕಿನಲ್ಲಿ ನೆಮ್ಮದಿ ಎಂಬುದು ನೆಲೆಸಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ ಹೇಳಿದರು.
ಪಟ್ಟಣದ ಭೈರಾಪುರದಲ್ಲಿ ಬುಧವಾರ ಶ್ರೀ ಚನ್ನಪ್ಪಾಜಿ ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು, ಸಾಂಪ್ರದಾಯಿಕವಾಗಿ ನಮ್ಮ ಹಿರಿಯರು ದೇವಾಲಯಗಳಿಗೆ ಹಿಂದಿನಿಂದಲೂ ಪ್ರಾಮುಖ್ಯತೆ ನೀಡಿದ್ದರಿಂದಲೇ ಪ್ರತಿಯೊಂದು ಊರು, ಕೇರಿಯಲ್ಲಿ ಗುಡಿ-ಗೋಪುರಗಳನ್ನು ನಿರ್ಮಾಣ ಮಾಡಿದ್ದಾರೆ. ಅವುಗಳನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ತಿಳಿಸಿದರು.
ಭೈರಾಪುರದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶ್ರೀ ಚನ್ನಪ್ಪಾಜಿ ದೇವಾಲಯದ ಜೀರ್ಣೋದ್ಧಾರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತರಾಗಿದ್ದ ಕಾ.ಪು. ಸಿದ್ದಲಿಂಗಸ್ವಾಮಿ ಅವರು ವೈಯಕ್ತಿಕ ನೆರವು ನೀಡಿ ಅಭಿವೃದ್ಧಿ ಪಡಿಸಿದ್ದಾರೆ. ಗ್ರಾಮಸ್ಥರು ಹಾಗೂ ಭಕ್ತಾದಿಗಳು ದೇವಾಲಯ ನಿರ್ವಹಣೆಯನ್ನು ಸಮರ್ಪಕವಾಗಿಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ಬೊಪ್ಪೇಗೌಡನಪುರ ಮಠದ ಪ್ರಭುರಾಜೇ ಅರಸು ಅವರನ್ನು ಕಪಿಲಾ ನದಿ ತೀರದಿಂದ ಮೆರವಣಿಗೆ ಮೂಲಕ ಭೈರಾಪುರಕ್ಕೆ ಕರೆತರಲಾಯಿತು. ಸಮಾಜ ಸೇವಕ ಕಾ.ಪು. ಸಿದ್ದಲಿಂಗಸ್ವಾಮಿ ಅವರು ದೇವಾಲಯ ನಿರ್ಮಾಣಕ್ಕೆ ವೈಯಕ್ತಿಕ ನೆರವು ನೀಡಿದ್ದರಿಂದ ಅವರ ಸಹೋದರ ಕಾ.ಪು. ಸಿದ್ದವೀರಪ್ಪ ಅವರನ್ನು ಸನ್ಮಾನಿಸಲಾಯಿತು.
ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಂಜುನಾಥ್, ವರುಣ ಪ್ರಧಾನ ಕಾರ್ಯದರ್ಶಿ ಎಂ.ವೆಂಕಟರಮಣಶೆಟ್ಟಿ, ಎ.ಎನ್. ರಂಗುನಾಯ್ಕ, ಪುಟ್ಟಸ್ವಾಮಿ, ನಂದಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement