ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೈಸೂರಿಗೆ ಇಸ್ರೇಲ್ ಜೀಬ್ರಾಗಳು

Mainashree
Updated On : 18 Jun 2014, 10:38 am

ಕ.ಪ್ರ. ವಾರ್ತೆ, ಮೈಸೂರು, ಜೂ. 18
ಇಸ್ರೇಲ್‌ನ ರಾಮತ್ ಗಾನ್ (ಸಫಾರಿ) ಟೆಲ್ ಅವಿವ್ ಮೃಗಾಲಯದಿಂದ ಇತ್ತೀಚೆಗೆ ತರಲಾದ ನಾಲ್ಕು ಜೀಬ್ರಾಗಳನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಬಿಡುಗಡೆಗೊಳಿಸಿದರು.
ಒಂದೆಡೆ ಇಸ್ರೇಲ್‌ನ ಜನತೆ ಸುನ್ನಿ ಬಂಡುಕೋರರ ದಾಳಿಯಿಂದ ತತ್ತರಿಸಿದ್ದರೆ, ಮೈಸೂರು ಮೃಗಾಲಯಕ್ಕೆ ಕಳೆದ ಏಪ್ರಿಲ್ 25 ರಂದು ಆಗಮಿಸಿದ ಈ ನಾಲ್ಕು ಜೀಬ್ರಾಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ. ಅವುಗಳ ಆರೋಗ್ಯ ಮತ್ತು ಇಲ್ಲಿನ ಪರಿಸರಕ್ಕೆ ಹೊಂದುಕೊಳ್ಳುವವರೆಗೆ ಸಾರ್ವಜನಿಕ ವೀಕ್ಷಣೆಗೆ ಬಿಡಬಾರದು ಎಂಬ ಕಾರಣಕ್ಕೆ ಪರದೆಯಿಂದ ಮುಚ್ಚಿದ ಜೀಬ್ರಾ ಮನೆಗೆ ಬಿಡಲಾಗಿತ್ತು. ಇಂದು ತೆರೆ ಸರಿಸುವ ಮೂಲಕ ಪ್ರಮೋದಾದೇವಿ ಒಡೆಯರ್ ನಾಲ್ಕೂ ಜೀಬ್ರಾಗಳನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಿದರು.
ಚೀಟಿ ಎತ್ತು ಮೂಲಕ: ನಾಲ್ಕೂ ಪ್ರಾಣಿಗಳಿಗೂ ಹೆಸರು ಸೂಚಿಸುವಂತೆ ಮೃಗಾಲಯ ಸಾರ್ವಜನಿಕರಿಗೆ ತಿಳಿಸಿತ್ತು. ಅದರಂತೆ ಸಾರ್ವಜನಿಕರು ಸೂಚಿಸಿದ ಹೆಸರನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲು ಆಗಮಿಸಿದ್ದ ಪ್ರಮೋದಾದೇವಿ ಅವರು, ಒಂದು ಗಂಡು ಜೀಬ್ರಾ ಮತ್ತು ಒಂದು ಹೆಣ್ಣು ಜೀಬ್ರಾಕ್ಕೆ ತಾವೆ ಸ್ವತಃ ಹೆಸರು ಇಡುವುದಾಗಿ ಹೇಳಿ ಕ್ರಮವಾಗಿ ಡಜ್ಜಲ್ ಮತ್ತು ಡಾನ್ ಎಂಬ ಹೆಸರಿಟ್ಟರು. ಮತ್ತೆರಡು ಜೀಬ್ರಾ ಪೈಕಿ ಒಂದು ಗಂಡು ಜೀಬ್ರಾಕ್ಕೆ ಎಂ.ಎನ್. ಸೋಮಶೇಖರ್ ಅವರು ಸೂಚಿಸಿದ ಸುಧೀರ್ ಮತ್ತು ಹೆಣ್ಣು ಜೀಬ್ರಾಕ್ಕೆ ಕುವೆಂಪುನಗರದ ಆಶಾ ನಾರಾಯಣ್ ಅವರು ಸೂಚಿಸಿದ್ದ ರಿದ್ಧಿ ಎಂಬ ಹೆಸರಿದ್ದ ಚೀಟಿಯನ್ನು ಸಾರ್ವಜನಿಕರು ಲಾಟರಿ ಮೂಲಕ ಆಯ್ಕೆ ಮಾಡಿದರು.
ವೀಕ್ಷಣೆ: ಬಳಿಕ ಪ್ರಮೋದಾದೇವಿ ಒಡೆಯರ್ ಅವರು ಬ್ಯಾಟರಿ ವಾಹನದ ಮೂಲಕ ಒಂದು ಸುತ್ತು ಮೃಗಾಲಯ ವೀಕ್ಷಿಸಿದರು. ಬಹಳ ವರ್ಷಗಳ ಹಿಂದೆ ಭೇಟಿ ನೀಡಿದ್ದೆ. ಈಗ ಮೃಗಾಲಯ ತುಂಬಾ ಚೆನ್ನಾಗಿ ಅಭಿವೃದ್ಧಿ ಹೊಂದಿದೆ ಎಂದು ಮೆಚ್ಚುಗೆ ಸೂಚಿಸಿದರು. ಈ ಹಿಂದೆ ಒಡೆಯರ್ ಮತ್ತು ಕುಟುಂಬ ಸದಸ್ಯರು ನೇರವಾಗಿ ಕಾರಿನಲ್ಲಿ ಬಂದು ತಮ್ಮ ಕಾರಿನಲ್ಲಿಯೆ ಮೃಗಾಲಯ ವೀಕ್ಷಿಸಿ ಹಿಂದಿರುಗುತ್ತಿದ್ದರು. ಎಲ್ಲಿಯೂ ಇಳಿಯುತ್ತಿರಲಿಲ್ಲ. ಇದೆ ಮೊದಲ ಬಾರಿಗೆ ಪ್ರಮೋದಾದೇವಿ ಒಡೆಯರ್ ಬ್ಯಾಟರಿ ವಾಹನದಲ್ಲಿ ಮೃಗಾಲಯ ವೀಕ್ಷಿಸಿದರು. ಈ ವೇಳೆ ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಇದ್ದರು.
ಹಳೆಯ ಜೀಬ್ರಾ ಮನೆಯನ್ನು ನವೀಕರಿಸಲಾಗಿದೆ. ಅದರಂತೆ ವೀಕ್ಷಕರು ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಸ್ವಾಭಾವಿಕ ಮೇಲ್ಛಾವಣಿ ಒದಗಿಸಲಾಗಿದೆ. ಈ ಹಿಂದೆ 1960-70ರಲ್ಲಿ ಮೈಸೂರು ಮೃಗಾಲಯ ನಾಲ್ಕು ಜೀಬ್ರಾಗಳನ್ನು ಹೊಂದಿತ್ತು. ಹಲವು ವರ್ಷಗಳ ಬಳಿಕ 1990ರಲ್ಲಿ ಮೈಸೂರು ಮೃಗಾಲಯಕ್ಕೆ ಜರ್ಮನಿಯಿಂದ ಜೀಬ್ರಾ ತರಿಸಲಾಗಿತ್ತು. ಆದರೆ ಅವುಗಳ ಸಂತಾನಾಭಿವೃದ್ಧಿ ಆಗಿರಲಿಲ್ಲ. ಆಗ ಮೃಗಾಲಯ, ಬೆಂಗಳೂರು ಮತ್ತು ಚೆನ್ನೈನ ಅನಿಮಲ್ ಕ್ವಾರಂಟೇನ್ ಸರ್ಟಿಫಿಕೇಷನ್ ಸಹಕಾರ ಸಿಕ್ಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement