ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜಿಲ್ಲೆಯಲ್ಲಿ ಶೇ.70 ಬಿತ್ತನೆ ಪೂರ್ಣ

Mainashree
Updated On : 19 Jun 2014, 10:35 am

ಮೈಸೂರು: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಶೇ.68.5 ರಷ್ಟು ಬಿತ್ತನೆ ಪೂರ್ಣಗೊಂಡಿದ್ದರೆ, ನೀರಾವರಿ ಪ್ರದೇಶದಲ್ಲಿ ಈವರೆಗೆ ಶೇ.5 ರಷ್ಟು ಮಾತ್ರ ಬಿತ್ತನೆ ಪೂರ್ಣಗೊಂಡಿದೆ.
2014- 15ರ ಮುಂಗಾರಿಗೆ 4,19, 695 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ಗುರಿಯಿದ್ದು ಈ ಪೈಕಿ 2,09,289 ಹೆಕ್ಟೆರ್ ಬಿತ್ತನೆಯಾಗಿದೆ. ಮಳೆ ಆಶ್ರಯದಲ್ಲಿ 3,10, 210 ಹೆಕ್ಟೇರ್ ಗುರಿಯಿದ್ದು, ಈ ಪೈಕಿ 2,03,745 ಹೆಕ್ಟೆರ್ ಬಿತ್ತನೆಯಾಗಿದೆ. ನೀರಾವರಿಯಲ್ಲಿ 1,18,485 ಹೆಕ್ಟೇರ್ ಗುರಿಯಿದ್ದು, ಈ ಪೈಕಿ 5528 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಶೇ. 100 ಮಳೆ: 2014ನೇ ಸಾಲಿನ ವಾರ್ಷಿಕ ವಾಡಿಕೆ ಮಳೆ 801.4  ಮಿ.ಮೀ. ಜೂನ್ ಮಾಹೆಯವರೆಗೆ ಸಂಚಿತ ವಾಡಿಕೆ ಮಳೆ 254.6 ಮಿ.ಮೀ.ಇದ್ದು, ವಾಸ್ತವವಾಗಿ 255.7 ಮಿ.ಮೀ. ಮಳೆಯಾಗಿದೆ. ಅಂದರೆ ಶೇ.100 ರಷ್ಟು ಮಳೆಯಾಗಿದೆ. ಜೂನ್ ತಿಂಗಳ ಈವರೆಗಿನ ವಾಡಿಕೆ ಮಳೆ 45.2 ಮಿ.ಮೀ. ಆಗಿದ್ದು ವಾಸ್ತವವಾಗಿ 50.5 ಮಿ.ಮೀ. ಮಳೆಯಾಗಿದೆ. ಅಂದರೆ ಶೇ.112 ರಷ್ಟು ಮಳೆಯಾಗಿದೆ. ಒಟ್ಟಾರೆ ಟಿ.ನರಸೀಪುರ ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ.
2013- 14ನೇ ಬೇಸಿಗೆ ಬತ್ತ ಕಾಳು ಬಲಿಯುವ ಮತ್ತು ಕಟಾವು ಹಂತದಲ್ಲಿದೆ. 2014- 15ರ ಮುಂಗಾರಿನಲ್ಲಿ ಭೂಮಿ ತಯಾರಿ ಮತ್ತು ಕೊಟ್ಟಿಗೆ ಗೊಬ್ಬರವನ್ನು ಭೂಮಿಗೆ ಸೇರಿಸುವ ಕಾರ್ಯ ನಡೆಯುತ್ತಿದ್ದು, ಮಳೆ ಬಿದ್ದಿರುವ ಕಡೆ ಹೈಬ್ರಿಡ್ ಜೋಳ, ರಾಗಿ, ಮುಸುಕಿನಜೋಳ, ದ್ವಿದಳಧಾನ್ಯಗಳು, ನೆಲಗಡಲೆ, ಎಳ್ಳು, ಹತ್ತಿ ಮತ್ತು ಕಬ್ಬು ಇವುಗಳ ಬಿತ್ತನೆ ಹಾಗೂ ಹೊಗೆಸೊಪ್ಪಿನಲ್ಲಿ ನಾಟಿ ಕಾರ್ಯ ಮುಂದುವರಿದಿದೆ. ದ್ವಿದಳ ಧಾನ್ಯ ಬೆಳೆಗಳಲ್ಲಿ ಅಲ್ಲಲ್ಲಿ ಹೇನಿನ ಬಾಧೆ ಕಂಡುಬಂದಿದೆ. ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ ಸೂಕ್ತ ಸಿಂಪರಣೆ ಕೈಗೊಳ್ಳಲುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ. ಮಹಂತೇಶಪ್ಪ ಸಲಹೆ ನೀಡಿದ್ದಾರೆ.
2014- 15ರ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆಯಲ್ಲಿ ಹೈಬ್ರಿಡ್‌ಜೋಳ, ಮುಸುಕಿನಜೋಳ ಮತ್ತು ದ್ವಿದಳ ಧಾನ್ಯ ಬೆಳೆಗಳ ದೃಢೀಕೃತ ಬಿತ್ತನೆ ಬೀಜಗಳ ದಾಸ್ತಾನು ಇದ್ದು ಯಾವುದೇ ಕೊರತೆ ಇಲ್ಲ. ರೈತರು ರೈತಸಂಪರ್ಕ ಕೇಂದ್ರ ಅಥವಾ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement