ಯಶಸ್ವಿನಿ ಸದುಪಯೋಗವಾಗಲಿ
ಮೈಸೂರು: ಸಹಕಾರ ಸಂಘಗಳ ಸದಸ್ಯರಿಗೆ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯು ಸದುಪಯೋಗವಾಗಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಅಗ್ರಹಾರದ ಬ್ಯಾಂಕ್‌ನ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಬ್ಯಾಂಕ್‌ನ 96ನೇ ಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಇ- ಸ್ಟಾಪಿಂಗ್ ಹಾಗೂ ಡಿ.ಡಿ. ಸೌಲಭ್ಯಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗಕ್ಕೆ ಸೀಮಿತವಾಗಿದ್ದ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಿದ್ದು, ಇಂತಹ ಯೋಜನೆ ಸದುಪಯೋಗವನ್ನು ಸದಸ್ಯರು ಪಡೆದುಕೊಳ್ಳಬೇಕು ಎಂದ ಅವರು, ಮೈಸೂರಿನಲ್ಲಿ ಕಳೆದ 96 ವರ್ಷಗಳ ಇತಿಹಾಸ ಹೊಂದಿರುವ ಕೃಷ್ಣರಾಜ ಸಹಕಾರ ಬ್ಯಾಂಕ್ ತನ್ನದೇ ಆದ ಪರಂಪರೆ ಹೊಂದಿದೆ. ಸಹಕಾರ ಬ್ಯಾಂಕ್‌ನಲ್ಲಿಯೂ ಗ್ರಾಹಕರು ಇಷ್ಟೊಂದು ಹಣವನ್ನು ಠೇವಣಿಯಾಗಿ ಇಡುತ್ತಿರುವುದು ಶ್ಲಾಘನೀಯ ಎಂದರು.
ಸಹಕಾರ ಸಂಘಗಳ ಜಂಟಿ ನಿಬಂಧಕರು ಕೆ.ಎಂ.ಆಶಾ, ಉಪನಿಬಂಧಕರಾದ ಪಿ. ಶಶಿಧರ್ ಮುಖ್ಯ ಅತಿಥಿಗದ್ದರು. ಬ್ಯಾಂಕ್‌ನ ಅಧ್ಯಕ್ಷ ಎಚ್.ವಾಸು ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಪ್ರತಿಧ್ವನಿ ಪ್ರಸಾದ್, ನಂ.ಸಿದಪ್ಪ, ಜಿ.ಎಂ. ಪಂಚಾಕ್ಷರಿ, ತಾಯೂರು ವಿಠಲಮೂರ್ತಿ, ಎಚ್.ವಿ. ಭಾಸ್ಕರ್, ಎಂ.ಡಿ. ಪಾರ್ಥಸಾರಥಿ, ಎನ್.ಕೆ. ಇಂದಿರಾ, ಎಂ. ಪಾರ್ವತಮ್ಮ ಹಾಗೂ ಪ್ರಭಾರ ವ್ಯವಸ್ಥಾಪಕ ಡಿ.ಡಿ. ಹೊನ್ನಪ್ಪ ಇದ್ದರು.