ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಿಕ್ಕಿಬಿದ್ದ ಮಹಿಳಾ ವಂಚಕ

Vishwanath S
Updated On : 21 Jun 2014, 12:10 pm

ಮೈಸೂರು: ಸರ್ಕಾರದಿಂದ ಪಿಂಚಣಿ, ಸಹಾಯಧನ ಕೊಡಿಸುವಾಗಿ ವಯಸ್ಸಾದ ಮಹಿಳೆಯರಿಗೆ ಅಮಿಷವೊಡ್ಡಿ ಚಿನ್ನಾಭರಣ ಬಿಚ್ಚಿಸಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿ, 2.50 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕು ಹೊಸ ಅಗ್ರಹಾರ ಹೋಬಳಿ ಗುಳುವಿನ ಹತ್ತಿಗುಪ್ಪೆ ಗ್ರಾಮದ ಲೇ. ವೆಂಕಟೇಶ ಎಂಬವರ ಪುತ್ರ ಹರೀಶ (22) ಬಂಧಿತ ಆರೋಪಿ.
ಕಳೆದ ಎರಡು ವರ್ಷಗಳಿಂದ ವ್ಯಕ್ತಿಯೊಬ್ಬ ಕೆ.ಆರ್. ಆಸ್ಪತ್ರೆ ಹಾಗೂ ನಗರ ಬಸ್ ನಿಲ್ದಾಣದಲ್ಲಿ ವಯಸ್ಸಾದ ಮಹಿಳೆಯರಿಗೆ ಪಿಂಚಣಿ ಹಣ ಬರುವಂತೆ ಮಾಡಿಸುತ್ತೇನೆ, ಸರ್ಕಾರದಿಂದ ಹಣ ಕೊಡಿಸುತ್ತೇನೆ ಎಂದು ನಂಬಿಸಿ, ಅವರಿಂದ ಚಿನ್ನಾಭರಣ ಬಿಚ್ಚಿಸಿಕೊಂಡು ಪರಾರಿಯಾಗುತ್ತಿದ್ದ. ದೂರುದಾರರು ನೀಡಿದ ಮಾಹಿತಿ ಮೇರೆಗೆ, ಆರೋಪಿಯ ರೇಖಾಚಿತ್ರ ಸಿದ್ಧಪಡಿಸಿದ್ದರು. ನಗರ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯು ರೇಖಾಚಿತ್ರಕ್ಕೆ ಹೋಲಿಕೆಯಾದ ಹಿನ್ನೆಲೆಯಲ್ಲಿ ಹರೀಶನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ಕಾಲದಲ್ಲಿ ಈತ ವಯಸ್ಸಾದ ಮಹಿಳೆಯರಿಗೆ ಪಿಂಚಣಿ ಹಾಗೂ ಇತರೆ ಸರ್ಕಾರಿ ಹಣ ಕೊಡಿಸುವುದಾಗಿ ಮೋಸ ಮಾಡುತ್ತಿದ್ದು ತಿಳಿದುಬಂದಿದೆ. ಬಂಧಿತನಿಂದ ದೇವರಾಜ ಠಾಣೆಯ 4 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು 2.50 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್
ಮೈಸೂರು: ಯುಪಿಸಿಎಲ್(1100 ಎಂಡಬ್ಲ್ಯು), ಆರ್‌ಟಿಪಿಎಸ್(800 ಎಂಡಬ್ಲ್ಯು), ಬಿಟಿಪಿಎಸ್(150 ಎಂಡಬ್ಲ್ಯು) ಹಾಗೂ ಇತರೆ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ (500 ಎಂಡಬ್ಲ್ಯೂ) ವಿದ್ಯುತ್ ಉತ್ಪಾದನೆ ವ್ಯತ್ಯಯವಾಗಿರುವುದರಿಂದ ಗ್ರಾಮಾಂತರ, ಮೈಸೂರು ಹಾಗೂ ಇತರೆ ನಗರಗಳಲ್ಲಿ ತಾತ್ಕಾಲಿಕವಾಗಿ ಅನಿಮಿಯತ ಲೋಡ್ ಶೆಡ್ಡಿಂಗ್ ಮಾಡಲಾಗುವುದು ಎಂದು ಸೆಸ್ಕ್ ಮುಖ್ಯ ಎಂಜಿನಿಯರ್ ಹೇಳಿದ್ದಾರೆ. ಗ್ರಾಹಕರು ಸೆಸ್ಕ್‌ನೊಂದಿಗೆ ಸಹಕರಿಸುವಂತೆ ಅವರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement