ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ಪ್ರತಿಭಟನೆ

Mainashree
Updated On : 23 Jun 2014, 10:47 am

ಸರಗೂರು: ಎಚ್.ಡಿ. ಕೋಟೆ ತಾಲೂಕು ಸರಗೂರನ್ನು ತಾಲೂಕು ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸಿ ಸೋಮವಾರ ಪ್ರತಿಭಟಿಸಲಾಯಿತು.  
ಸಂತೆ ಮಾಸ್ತಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರತಿಭಟನಾಕಾರರು ನಂತರ ಎರಡನೇ ಮುಖ್ಯರಸ್ತೆ, ಬಸವೇಶ್ವರ ರಸ್ತೆ, ಚಿಕ್ಕದೇವಮ್ಮ ವೃತ್ತ, ಮಹಾವೀರ ವೃತ್ತ ಮೂಲಕ ಬಸ್ ನಿಲ್ದಾಣಕ್ಕೆ ಬಂದು ಪಪಂ ಮುಂಭಾಗ ಪ್ರತಿಭಟಿಸಿದರು.
ಇದೇ ವೇಳೆ ಸರಗೂರು ಕೃಷ್ಣ ಮಾತನಾಡಿ, ಸರಗೂರು ತಾಲೂಕು ಕೇಂದ್ರ ರಚನೆ ಆಗಬೇಕು ಎಂದು ಸುಮಾರು 20 ವರ್ಷ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ಸರಗೂರು ತಾಲೂಕು ಕೇಂದ್ರವಾದರೆ ಸರಗೂರು ವ್ಯಾಪ್ತಿಯ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾದ್ಯ.
ಸರ್ಕಾರ ಕೂಡಲೆ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಪರಿಣಾಮ ಸುಮಾರು 15 ನಿಮಿಷ ವಾಹನ ಸಂಚಾರ ಸ್ಥಗಿತವಾಗಿತ್ತು.
ಸರಗೂರು ನಾಡಕಚೇರಿ ಉಪ ತಹಸೀಲ್ದಾರ್ ಸುನಿಲ್ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.
ಮುಖಂಡರಾದ ರವಿ, ರಾಮಕೃಷ್ಣ, ಪುಟ್ಟರಾಜು, ವೆಂಕಟೇಶ್, ಪುಟ್ಟೇಗೌಡ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement