ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪ್ರಾಮಾಣಿಕತೆ ಮೆರೆದ ಆಟೋ ಚಾಲಕ: ಪೊಲೀಸ್ ಆಯುಕ್ತರ ಶ್ಲಾಘನೆ

Mainashree
Updated On : 23 Jun 2014, 10:50 am

ಮೈಸೂರು: ಗಡಿಬಿಡಿಯಲ್ಲಿ ಮರೆತು ಬಿಟ್ಟು ಹೋಗಿದ್ದ 50 ಸಾವಿರ ಮೌಲ್ಯದ ಚಿನ್ನಾಭರಣ ಉಳ್ಳ ಬ್ಯಾಗ್ ಅನ್ನು ವಾರಸುದಾರರಿಗೆ ತಲುಪಿಸುವ ಮೂಲಕ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಪ್ರದರ್ಶಿಸಿದ್ದಾರೆ. ಆಟೋ ಚಾಲಕ ಪ್ರದೀಪ್ ಎಂಬವರೆ ಪ್ರಾಮಾಣಿಕತೆ ಪ್ರದರ್ಶಿಸಿದವರು. ಕಳೆದ ಜೂ.21 ರಂದು ಲಾರಿ ಚಾಲಕ ಹುಣಸೂರಿನ ಮುಸ್ತಾಕ್ ಅಹಮ್ಮದ್ ಎಂಬವರು ತುಮಕೂರಿನ ಬೆಳ್ಳೂರಿನಿಂದ ಕುಟುಂಬ ಸಮೇತರಾಗಿ ಮೈಸೂರಿಗೆ ವಾಪಸಾಗಿದ್ದರು. ಬಳಿಕ ವಿದ್ಯಾರಣ್ಯಪುರಂನ ಗೋದಾಮಿನಲ್ಲಿ ಲಾರಿ ನಿಲ್ಲಿಸಿ, ಆಟೋ ಮೂಲಕ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಆ ವೇಳೆ ಗಡಿಬಿಡಿಯಿಂದಾಗಿ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಆಟೋದಲ್ಲಿ ಬಿಟ್ಟು ಹೊರಟು ಹೋಗಿದ್ದರು. ಮರು ದಿನ ಹುಣಸೂರಿನಿಂದ ಮೈಸೂರು ನಗರಕ್ಕೆ ಬಂದು ಹುಡುಕಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇತ್ತ ಪ್ರದೀಪ್ ಬೆಳಗ್ಗೆ ಎದ್ದು ಆಟೋ ಗಮನಿಸಿದಾಗ ಬ್ಯಾಗ್ ಸಿಕ್ಕಿದೆ. ಕೂಡಲೇ ಹತ್ತಿರದ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಬ್ಯಾಗ್ ಅನ್ನು ತಲುಪಿಸಿದ್ದಾರೆ. ನಂತರ ಅದನ್ನು ವಾರಸುದಾರ ಮಸ್ತಾಕ್‌ಗೆ ಹಸ್ತಾಂತರಿಸಿದರು. ಆಟೋ ಚಾಲಕ ಪ್ರದೀಪ್‌ಗೆ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ 1 ಸಾವಿರ ನಗದು ಬಹುಮಾನ ನೀಡಿ ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement