ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಯುಜಿಸಿ ಇ- ಪಿಜಿ ಪಾಠಶಾಲಾ

Mainashree
Updated On : 23 Jun 2014, 10:51 am

ಮೈಸೂರು: ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು ಮೈಸೂರು ವಿವಿಯ ಭೂವಿಜ್ಞಾನ ಮತ್ತು ಭೂಗರ್ಭಶಾಸ್ತ್ರ ವಿಭಾಗಕ್ಕೆ ಇ-ಪಿಜಿ ಪಾಠಶಾಲಾ ಆಯೋಜನೆಗೆ ಪಠ್ಯಕ್ರಮ ಸಿದ್ಧಪಡಿಸುವ ಹೊಣೆ ಹೊತ್ತಿದೆ.
ಯುಜಿಸಿಯ ಮಾಹಿತಿ ಗ್ರಂಥಾಲಯ ಜಾಲ ಕೇಂದ್ರ ಮತ್ತು ಕೇಂದ್ರ ಮಾನವ ಸಂಪನ್ಮೂಲ ಮಂತ್ರಾಲಯವು ರಾಷ್ಟ್ರೀಯ ಮಿಷನ್ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿವಿಯ ಭೂವಿಜ್ಞಾನ ಮತ್ತು ಭೂಗರ್ಭಶಾಸ್ತ್ರ ವಿಭಾಗಕ್ಕೆ ಪ್ರತ್ಯೇಕವಾಗಿ 1.12 ಕೋಟಿ ಅನುದಾನ ಬಿಡುಗಡೆಗೊಳಿಸಿ ಈ ಪಠ್ಯಕ್ರಮ ಸಿದ್ಧಪಡಿಸುತ್ತಿದೆ.
ದೂರ ಶಿಕ್ಷಣದ ಮೂಲಕ ಬಿ.ಎಸ್ಸಿ, ಎಂ.ಎಸ್ಸಿ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೈಗೊಂಡ ಈ ಯೋಜನೆಯಡಿ 77 ವಿಷಯಗಳ ಕುರಿತು ಪಠ್ಯಕ್ರಮ ರೂಪಿಸಲಾಗುತ್ತಿದೆ. ಈ ಪೈಕಿ ಭೂವಿಜ್ಞಾನ ಮತ್ತು ಭೂಗರ್ಭ ಶಾಸ್ತ್ರವೂ ಸೇರಿದೆ. ಕಳೆದ 2013ರ ಆಗಸ್ಟ್ ತಿಂಗಳಲ್ಲಿ ಭೂವಿಜ್ಞಾನ ಶಾಸ್ತ್ರ ವಿಷಯಕ್ಕೆ ಪಠ್ಯ ಕ್ರಮ ರೂಪಿಸಲು ಅನುದಾನ ಬಿಡುಗಡೆ ಆಗಿತ್ತು. ಈ ವರ್ಷದ ಜನವರಿಯಲ್ಲಿ ಭೂಗರ್ಭ ವಿಷಯದಲ್ಲಿ ಪಠ್ಯಕ್ರಮ ಸಿದ್ಧಪಡಿಸಲು ಯುಜಿಸಿ ಸೂಚಿಸಿದೆ.
ಭೂವಿಜ್ಞಾನ ಉನ್ನತ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ಎಸ್. ಗೋವಿಂದಯ್ಯ ನೇತೃತ್ವದಲ್ಲಿ ಎರಡೂ ವಿಷಯಕ್ಕೂ ಪ್ರತ್ಯೇಕ ತಂಡ ರಚಿಸಲಾಗಿದೆ. ಭೂವಿಜ್ಞಾನ ವಿಷಯದಲ್ಲಿ ಪ್ರಧಾನ ಪರಿಶೋಧಕರಾಗಿ ಪ್ರೊ.ಎ. ಬಾಲಸುಬ್ರಹ್ಮಣ್ಯ, ಸಹ ಪ್ರಧಾನ ಪರಿಶೋಧಕರಾಗಿ ಪ್ರೊ.ಪ್ರಕಾಶನರಸಿಂಹ ಇದ್ದಾರೆ. ಭೂಗರ್ಭ ವಿಭಾಗದಿಂದ ಪ್ರಧಾನ ಪರಿಶೋಧಕರಾಗಿ ಎಂ.ಎಸ್. ಸೇತು ಮಾಧವ್, ಸಹ ಪ್ರಧಾನ ಪರಿಶೋಧಕರಾಗಿ ಪ್ರೊ.ಡಿ. ನಾಗರಾಜು ಅವರನ್ನು ನೇಮಿಸಲಾಗಿದೆ.
ಎರಡು ವರ್ಷಗಳ ಈ ಯೋಜನೆಯನ್ನು ಅವಧಿ ಮುಗಿದ ಬಳಿಕ ಮತ್ತೆರಡು ವರ್ಷಕ್ಕೆ ವಿಸ್ತರಿಸಬೇಕೆ ಬೇಡವೆ ಎಂಬುದು ಯುಜಿಸಿಗೆ ಬಿಟ್ಟ ವಿಷಯ. ಈಗ ಭೂ ವಿಜ್ಞಾನ ವಿಭಾಗದಿಂದ 50 ಪಠ್ಯ ಮತ್ತು ಭೂಗರ್ಭ ವಿಭಾಗದಿಂದ 40 ಪಠ್ಯಗಳನ್ನು ಸಿದ್ಧಪಡಿಸಿ ಅಂತರ್ಜಾಲದಲ್ಲಿ ದಾಖಲಿಸಲಾಗಿದೆ. ಒಟ್ಟು ಪ್ರತಿ ವಿಭಾಗವು 2 ವರ್ಷಗಳಲ್ಲಿ 640 ಪಠ್ಯಗಳನ್ನು ಸಿದ್ಧಪಡಿಸಬೇಕು. ದೇಶದ 550 ವಿಶ್ವವಿದ್ಯಾಲಯಗಳ ಸಾವಿರಾರು ಕಾಲೇಜುಗಳ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಾರೆ.
ಎಜುಸ್ಯಾಟ್ ಮಾದರಿಯಲ್ಲಿ ಈ ಸಿದ್ಧ ಪಠ್ಯಗಳನ್ನು ವಿದ್ಯಾರ್ಥಿಗಳು ವೀಕ್ಷಿಸಬಹುದು. ಅಂಧ ವಿದ್ಯಾರ್ಥಿಗಳಿಗಾಗಿ ಧ್ವನಿ ಮುದ್ರಿತ ವ್ಯವಸ್ಥೆಯೂ ಇರುತ್ತದೆ ಹಾಗೂ ದೃಶ್ಯ ಮುದ್ರಿತ ವ್ಯವಸ್ಥೆಯೂ ಇರುತ್ತದೆ. ಇದರ ಜೊತೆಗೆ ಪ್ರಶ್ನೆ ಮತ್ತು ಉತ್ತರವೂ ಸಿದ್ಧ ಇರುತ್ತದೆ. ಆಯಾ ವಿಷಯಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳು ್ಝಟಿಜಿಟ್ಝಛಿಟಿಜಡಿ.ಛ್ಛ.್ಝಟಿಗೆ ಲಾಗ್ ಇನ್ ಆಗಿ, ಅಲ್ಲಿ ಜ-ಕಿಎಕಿಛಝಿಛಝಛಟಛ ಮೇಲೆ ಕ್ಲಿಕ್ ಮಾಡಿದರೆ ತಮಗೆ ಬೇಕಾದ ವಿಷಯ ಆಯ್ದುಕೊಳ್ಳಬಹುದು.


ಡಿ.ಎನ್. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement