ನಾಳೆಯಿಂದ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನ್ನಿಸ್ ಪಂದ್ಯಾವಳಿ
ಮೈಸೂರು: ಮೈಸೂರು ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ನಳಂದ ಗುರುಕುಲ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸಹಯೋಗದೊಂದಿಗೆ ಜೂ. 26 ರಿಂದ 29 ರವರೆಗೆ ಪಿರಿಯಾಪಟ್ಟಣ ತಾಲೂಕಿನ ಗುಡ್ಡೇನಹಳ್ಳಿಯಲ್ಲಿರುವ ಶಾಲಾ ಆವರಣದಲ್ಲಿ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನ್ನಿಸ್ ಪಂದ್ಯಾವಳಿ ಆಯೋಜಿಸಿದೆ.
ಜೂ. 26ರ ಸಂಜೆ 4ಕ್ಕೆ ಅಂತಾರಾಷ್ಟ್ರೀಯ ಸ್ಕೇಟರ್ ಅಕಾಶ್ ಆರಾಧ್ಯ ಉದ್ಘಾಟಿಸಲಿದ್ದು, ಎನ್ಜಿಇಎಫ್ ಮುಖ್ಯಸ್ಥ ಎಸ್.ಎಲ್.ಎನ್. ಸತ್ಯಪ್ಪನ್, ಕೆಟಿಟಿಎ ತಾಂತ್ರಿಕ ಕಾರ್ಯದರ್ಶಿ ಆರ್. ನಂದನ್, ಪ್ರತಿನಿಧಿ ಟಿ.ಜಿ. ಉಪಾಧ್ಯ ಭಾಗವಹಿಸುವರು. ಜೂ. 29ರ ಮಧ್ಯಾಹ್ನ 3ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಎನ್ಸಿಎಸ್ಪಿ ಲಿ. ಮುಖ್ಯಸ್ಥ ದೇವಿ ಪೊನ್ನಾಚ, ಕೆಟಿಟಿಎ ಕಾರ್ಯದರ್ಶಿ ಕೆ.ಎಸ್. ವಸಂತಕುಮಾರ್, ಎಂಡಿಟಿಟಿಎ ಉಪಾಧ್ಯಕ್ಷ ಎಂ. ಪೆರುಮಾಳ್ ಭಾಗವಹಿಸುವರು ಎಂದು ಎಂಡಿಟಿಟಿಎ ಅಧ್ಯಕ್ಷ ಎಸ್. ಸುಧಾಕರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಂದ್ಯಾವಳಿಯು ಕ್ಯಾಡೆಟ್ ಬಾಲಕ- ಬಾಲಕಿಯರು, ಸಬ್ ಜೂನಿಯರ್ ಬಾಲಕ- ಬಾಲಕಿಯರು, ಜೂನಿಯರ್ ಬಾಲಕ- ಬಾಲಕಿಯರು, ಯೂಥ್ ಬಾಲಕರು, ವೆಟರನ್ಸ್ ಸಿಂಗಲ್ಸ್, ಎನ್ಎಂಎಸ್ ವಿಭಾಗಗಳಲ್ಲಿ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 250ಕ್ಕೂ ಆಟಗಾರರು ಭಾಗವಹಿಸಲಿದ್ದು, ಪ್ರತಿ ವಿಭಾಗಕ್ಕೂ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ರಾಜ್ಯ ಮಟ್ಟದಲ್ಲಿ 2ನೇ ರ್ಯಾಂಕ್ ಹೊಂದಿರುವ ಬೆಳಗಾವಿಯ ಭಕ್ತಿ ಮನುಕಾರ್ ಭಾಗವಹಿಸಲಿದ್ದಾರೆ ಎಂದರು. ಪಂದ್ಯಾವಳಿಯಲ್ಲಿ ಭಾಗವಹಿಸುವರಿಗೆ ಕುಶಾಲನಗರ ಬಸ್ ನಿಲ್ದಾಣದಿಂದ ವಾಹನ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಪ್ರತಿ ಅರ್ಧ ಗಂಟೆಗೆ ವಾಹನ ನಳಂದ ಇಂಟರ್ನ್ಯಾಷನಲ್ ಶಾಲಾ ಆವರಣಕ್ಕೆ ಕರೆತರಲಿದೆ ಎಂದು ಅವರು ತಿಳಿಸಿದರು. ಸಂಸ್ಥೆಯ ಅಧ್ಯಕ್ಷ ದೇವಯ್ಯ, ಎಂಟಿಟಿಡಿ ಕಾರ್ಯದರ್ಶಿ ಮಂಜುನಾಥ ಅರಸ್, ಆರ್. ರೋಹಿತ್, ಜಾರ್ಜ್ ಹೆನ್ರಿ ಇದ್ದರು.