ವಿದ್ಯುತ್ ಶಾರ್ಟ್ ಸರ್ಕಿಟ್: ಅಂಗಡಿಯಲ್ಲಿ ಬೆಂಕಿ
ಮೈಸೂರು: ವಿದ್ಯುತ್ ಸಾರ್ಟ್ ಸರ್ಕ್ಯೂಟ್ನಿಂದ ಮಳಿಗೆಯೊಂದರಲ್ಲಿ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರು. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ನಗರದ ಲ್ಯಾನ್ಸ್ಡೌನ್ ಹಿಂಭಾಗದಲ್ಲಿರುವ ಹಳೇ ಸಂತೆಪೇಟೆಯ ಮಮತಾ ಜನರಲ್ ಸ್ಟೋರ್ಸ್ನಲ್ಲಿ ವಿದ್ಯುತ್ ಸಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಮಾಲೀಕ ಲಾದರಾಮ್ ಎಂದಿನಂತೆ ಬೆಳಗ್ಗೆ ವ್ಯಾಪಾರದಲ್ಲಿ ತೊಡಗಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಈ ಸಂಬಂಧ ದೇವರಾಜ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.