ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಾಲಿಕೆ ಸದಸ್ಯತ್ವಕ್ಕೆ ಮಂಜುಳಾ ಮಾನಸ ರಾಜೀನಾಮೆ

Mainashree
Updated On : 26 Jun 2014, 10:29 am

ಮೈಸೂರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿರುವ ಮಂಜುಳಾ ಮಾನಸ, ನಗರ ಪಾಲಿಕೆ ಸದಸ್ಯತ್ವಕ್ಕೆ ಗುರುವಾರ ರಾಜಿನಾಮೆ ಸಲ್ಲಿಸಿದರು.
ಒಬ್ಬರಿಗೆ ಒಂದೇ ಹುದ್ದೆ ಸೂತ್ರ ಹಾಗೂ ಪಾಲಿಕೆ ಸದಸ್ಯತ್ವಕ್ಕಿಂತ ಮಹಿಳಾ ಆಯೋಗದ ಅಧ್ಯಕ್ಷ ಸ್ಥಾನ ಮುಖ್ಯ. ಹೀಗಾಗಿ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದರು ಎನ್ನಲಾಗಿದೆ.
ಮಂಜುಳಾ ಮಾನಸ ಅವರನ್ನು ಮೇಯರ್ ಎಂ.ಎನ್. ರಾಜೇಶ್ವರಿ ಹೂ ಗುಚ್ಛನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ರಾಜಿನಾಮೆ ಸ್ವೀಕರಿಸಿ,  ಹೊಸ ಹುದ್ದೆಯಲ್ಲಿ ಸಮರ್ಥವಾಗಿ ಕೆಲಸ ಮಾಡಿ, ಕೀರ್ತಿ ಪಡೆಯುವಂತೆ ಶುಭ ಕೋರಿದರು.
ಪಕ್ಷಭೇದ ಮರೆತು ಎಲ್ಲ ಪಾಲಿಕೆ ಸದಸ್ಯರೂ ಮಂಜುಳಾ ಮಾನಸ ಅವರಿಗೆ ಶುಭ ಕೋರಿದರು.  ಜೂ.21 ರಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಮಂಜುಳಾ ಮಾನಸ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಅವರು ನಗರ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಅವರು ನಗರ ಪಾಲಿಕೆಯ ವಾರ್ಡ್ ನಂ. 15 ರಿಂದ ಕಾಂಗ್ರೆಸ್‌ನಿಂದ ಆಯ್ಕೆ ಆಗಿದ್ದರು. ಇವರ ರಾಜೀನಾಮೆಯಿಂದಾಗಿ 15ನೇ ವಾರ್ಡಿಗೆ ಉಪ ಚುನಾವಣೆ ನಡೆಯಲಿದೆ. ಪಾಲಿಕೆ ಮಾಜಿ ಸದಸ್ಯ ಸುನಂದ ಪಾಲನೇತ್ರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪರಾಭವಗೊಂಡಿದ್ದರು. ಈ ಬಾರಿಯೂ ಅವರೇ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಲಿದೆ, ಜೆಡಿಎಸ್ ಏನು ಮಾಡಲಿದೆ ಕಾದು ನೋಡಬೇಕಿದೆ. ಏಕೆಂದರೆ ಪಾಲಿಕೆಯಲ್ಲಿ ಜೆಡಿಎಸ್- ಬಿಜೆಪಿ ದೋಸ್ತಿ ಮಾಡಿಕೊಂಡು ಅಧಿಕಾರ ಹಿಡಿದಿವೆ.
ಈ ವೇಳೆ ಮಾಜಿ ಮೇಯರ್‌ಗಳಾದ ಅಯೂಬ್‌ಖಾನ್, ಪುಷ್ಪಲತ ಚಿಕ್ಕಣ್ಣ, ಎಂ.ಸಿ. ಚಿಕ್ಕಣ್ಣ, ಪುರುಷೋತ್ತಮ್, ಸಂದೇಶ್ ಸ್ವಾಮಿ, ಸದಸ್ಯರಾದ ರಜಿನಿ, ಉಮಾಮಣಿ, ಸುನಿಲ್‌ಕುಮಾರ್, ಸುನಿಲ್, ಡಿ. ನಾಗಭೂಷಣ್, ತಸ್ಲೀಂ, ಸುಹೇಲ್ ಬೇಗ್, ಭಾಗ್ಯವತಿ, ಪ್ರಶಾಂತ್ ಗೌಡ, ಆಡಳಿತ ಪಕ್ಷದ ನಾಯಕ ಕೆ.ವಿ. ಮಲ್ಲೇಶ್,  ಬಿಜೆಪಿ ನಾಯಕ ಶಿವಕುಮಾರ್, ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement