ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮನುಷ್ಯ ಸದಾ ಪ್ರಕೃತಿ ಭಾಗವಾಗಿರಲಿ

Mainashree
Updated On : 28 Jun 2014, 10:32 am

ಮೈಸೂರು: ಮನುಷ್ಯ ಸದಾ ಪ್ರಕೃತಿಯ ಭಾಗವಾಗಿ ಅನುಭವಿಸುವುದನ್ನು ಕಲಿಯಬೇಕು ಎಂದು ಬಿಜಾಪುರದ ಜ್ಞಾನ ಯೋಗಾಶ್ರವುದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು. ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಶನಿವಾರ ನಡೆದ ಜೆಎಸ್‌ಎಸ್ ಮಹಾವಿದ್ಯಾಪೀಠದ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಶಿವಾನುಭವ ದಾಸೋಹ- 200ರ ಉಪನ್ಯಾಸ ನೀಡಿದ ಅವರು, ನಿಸರ್ಗ ಎನ್ನುವುದು ಅರ್ಥ ಮಾಡಿಕೊಳ್ಳುವುದಲ್ಲ ಅನುಭವಿಸುವುದು ಎಂದರು. ನಿಸರ್ಗ ಎಂಬುದು ಎಲ್ಲರ ಒಳಗೂ, ಹೊರಗೂ ಇದೆ. ಆದರೆ, ಅದು ಕಣ್ಣಿಗೆ ಕಾಣುವಂಥದಲ್ಲ, ಗೂಢವಾದದ್ದು. ಇಂದ್ರಿಯಾನುಭಕ್ಕೆ ಅತೀತವಾದ ನಿಸರ್ಗ ಅರಿಯುವುದು ಅಸಾಧ್ಯ ಎಂದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಿ.ಎಸ್.ಸಾದಶಿವಮೂರ್ತಿ ಸ್ವಾಗತಿಸಿದರು. ಪಿ.ಎಂ. ಮಹಾದೇವಸ್ವಾಮಿ ನಿರೂಪಿಸಿದರು.
ನಾಳೆ ವಿದ್ಯುತ್ ವ್ಯತ್ಯಯ
ಮೈಸೂರು: ಆರ್.ಕೆ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ ಶಾರದಾದೇವಿ ನಗರ ಹಾಗೂ ಬೋಗಾದಿ ಮಾರ್ಗದಲ್ಲಿ ತುರ್ತು ನಿರ್ವಹಣಾ ಕೆಲಸದ ನಿಮಿತ್ತ ಜೂ.30ರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 3ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಉಂಟಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದರು. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು, ಶಾರದಾದೇವಿನಗರ, ಜನತಾನಗರ, ಗಂಗೋತ್ರಿ ಲೇಔಟ್, ಟಿ.ಕೆ. ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement