ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೈಲಿಸಾದಿಂದ ಪ್ರಶ್ನಾವಳಿ ವಿನ್ಯಾಸ ಕಾರ್ಯಾಗಾರ

Mainashree
Updated On : 30 Jun 2014, 12:33 pm

ಮೈಸೂರು: ಮೈಸೂರು ಗ್ರಂಥಪಾಲಕರ ಮತ್ತು ಮಾಹಿತಿ ವಿಜ್ಞಾನಿಗಳ ಸಂಘದಿಂದ (ಮೈಲಿಸಾ) ಪ್ರಶ್ನಾವಳಿ ವಿನ್ಯಾಸ ಮತ್ತು ವಿಶ್ಲೇಷಣೆ ಕುರಿತ ಒಂದು ದಿನದ ಕಾರ್ಯಾಗಾರವನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಲೇಜಿನ ಪ್ರಾಂಶುಪಾಲ ಫಾ. ಲೆಸ್ಲಿ ಮೊರಾಸ್ ಮಾತನಾಡಿ, ಗುಣಮಟ್ಟದ ಸಂಶೋಧನೆ ಇಂದಿನ ದಿನದ ಅಗತ್ಯವಾಗಿದೆ. ಸದ್ಯ ನಡೆಯುತ್ತಿರುವ ಫುಟ್‌ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಯಾವೊಂದು ವಿವಿಯ ಹೆಸರಿಲ್ಲದಿರುವುದು ಶೋಚನೀಯ ಸಂಗತಿ. ಸ್ನಾತಕ ಮತ್ತು ಸ್ನಾತಕೋತ್ತರ ಅವಧಿಯಲ್ಲಿ ಯುವ ಪೀಳಿಗೆಯನ್ನು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸುವುದರ ಮೂಲಕ ಗುಣಮಟ್ಟ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ಮೈಸೂರು ವಿವಿ ಪಿಎಂಇಬಿಯ ಸಂಖ್ಯಾಶಾಸ್ತ್ರಜ್ಞ ಪ್ರೊ.ಎಸ್.ರವಿ ಮಾತನಾಡಿ, ಸಂಶೋಧಕರು ಮತ್ತು ಶಿಕ್ಷಣ ತಜ್ಞರಿಂದ ಕ್ರಿಯಾ ಚಟುವಟಿಕೆಗಳು ಹೆಚ್ಚಾಗಬೇಕು.
ಜರ್ನಲ್ಸ್‌ಗಳಲ್ಲಿ ಲೇಖನ ಪ್ರಕಟಗೊಳ್ಳುವ ಮೂಲಕ ಪುನರ್ ಪರಿಶೀಲಿಸಬೇಕು. ಇದು ಅತ್ಯಂತ ಸುಲಭದ ಕೆಲಸವಲ್ಲ. ಆದ್ದರಿಂದ ಹೆಚ್ಚು ಜಾಗೃತ ವಹಿಸಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಗ್ರಂಥಪಾಲಕ ಹಾಗೂ ಮೈಲಿಸಾ ಅಧ್ಯಕ್ಷ ಎಸ್. ನಾಗರಾಜು, ಮೈಸೂರು ವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಎನ್.ಎಸ್. ಹರಿನಾರಾಯಣ, ಸಂತ ಫಿಲೋಮಿನಾ ಕಾಲೇಜಿನ ಗ್ರಂಥಪಾಲಕ ರೊನಾಲ್ ಕುಟಿನೋ ಪ್ರಕಾಶ್, ಮೈಲಿಸಾ ಉಪಾಧ್ಯಕ್ಷ ಡಾ.ಸಿ.ಪಿ. ರಾಮಶೇಷ, ಪ್ರೊ.ಆರ್.ಇಂದಿರಾ, ಡಾ.ವಿ.ಬಿ. ಜೋಶಿ ಇದ್ದರು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 50ಕ್ಕೂ ಹೆಚ್ಚು ಮಂದಿ ಸಂಶೋಧಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement