ಲಷ್ಕರ್ ಮೊಹಲ್ಲಾದಲ್ಲಿ ಚಾಮುಂಡೇಶ್ವರಿ ಪೂಜಾ ಮಹೋತ್ಸವ ಇಂದಿನಿಂದ
ಮೈಸೂರು: ನಗರದ ಲಷ್ಕರ್ ಮೊಹಲ್ಲಾದ (ಬೆಂಗಳೂರು ಪೇಟೆ) ಭಾವಸಾರ ಕ್ಷತ್ರಿಯ ಚಾಮುಂಡೇಶ್ವರಿ ಯುವಕರ ಭಕ್ತ ಮಂಡಳಿಯು ಜು.1 ರಿಂದ 5 ರವರೆಗೆ 74ನೇ ವರ್ಷದ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ ಆಯೋಜಿಸಿದೆ.
ಐದು ದಿನಗಳು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಜು.1 ರಂದು ಚಾಮುಂಡೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪಿಸಿ, ಜು.5ರ ಮಧ್ಯಾಹ್ನ 12ಕ್ಕೆ ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದ ಬಳಿಯ ಕಾವೇರಿ ನದಿಯಲ್ಲಿ ದೇವಿಯ ಮೂರ್ತಿ ವಿಸರ್ಜಿಸಲಾಗುವುದು ಎಂದು ಭಕ್ತ ಮಂಡಳಿಯ ಖಜಾಂಚಿ ಕುತ್ನಿಕರ್ ವಾಸುದೇವರಾವ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಜು.3ರ ರಾತ್ರಿ 8ಕ್ಕೆ ಸನ್ಮಾನ ಸಮಾರಂಭ ಆಯೋಜಿಸಲಾಗಿದ್ದು, ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಗರಾಧ್ಯಕ್ಷ ಇ. ಮಾರುತಿರಾವ್ ಪವಾರ್, ಮಕ್ಕಳ ತಜ್ಞರಾದ ಡಾ. ಮೋತಿ ಸರೋದೆ, ಭಾವಸಾರ ಕ್ಷತ್ರಿಯ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಜೈಕುಮಾರ್ ಲಾಳಿಗೆ, ನಿರ್ದೇಶಕರಾದ ಅಂಜಲಿ ಬಾಲರಾಜ್ ರೇಳೇಕರ್, ರಶ್ಮಿ ವಾಸುದೇವಾರ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ಮಂಡಳಿಯ ಅಧ್ಯಕ್ಷ ಮಾವಟ್ಕರ್ ಶಿವಾಜಿ, ಉಪಾಧ್ಯಕ್ಷ ಲಾಳಿಗೆ ಪ್ರಶಾಂತ್, ಕಾರ್ಯದರ್ಶಿ ಲಾಳಿಗೆ ನಾಗೇಂದ್ರ, ಸಹ ಕಾರ್ಯದರ್ಶಿ ಲಾಳಿಗೆ ರವಿ, ಜಂಟಿ ಕಾರ್ಯದರ್ಶಿ ಲಾಳಿಗೆ ಗಣೇಶ್ ಇದ್ದರು.