ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಔಷಧ ಆವಿಷ್ಕಾರದಲ್ಲಿ ವಿವಿಗಳು ತೊಡಗಲಿ

Rashmi Kasaragodu
Updated On : 2 Mar 2014, 1:39 am

ಮೈಸೂರು: ವಿಶ್ವವಿದ್ಯಾನಿಲಯಗಳು ಮತ್ತು ಔಷಧ ತಯಾರಿಕ ಸಂಸ್ಥೆಗಳು ಜಂಟಿಯಾಗಿ ಔಷಧ ಆವಿಷ್ಕಾರದಲ್ಲಿ ತೊಡಗಬೇಕು ಎಂದು ಆರಿಜೀನ್ ಡಿಸ್ಕವರಿ ಟೆಕ್ನಾಲಜೀಸ್ನ ಹಿರಿಯ ಉಪಾಧ್ಯಕ್ಷ ಡಾ.ಎಚ್.ಎಸ್. ಸುಬ್ರಮಣ್ಯ ಹೇಳಿದರು. ಮೈಸೂರು ವಿವಿಯು ಸೆನೆಟ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಔಷಧಿಗಳ ಆವಿಷ್ಕಾರ ಹೇಗೆ ಪ್ರಯೋಗಾಲಯದಿಂದ ರುಗ್ಣಶಯ್ಯೆಗೆ ಕುರಿತ ವಿಶೇಷ ಉಪನ್ಯಾಸ ನೀಡಿದರು. ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಸಿ. ಬಸವರಾಜು, ಹಣಕಾಸು ಅಧಿಕಾರಿ ಪ್ರೊ. ರವಿ ಇನ್ನೂ ಮೊದಲಾದವರು ಇದ್ದರು.


ಜೀವನದ ಪ್ರತಿ ಹೆಜ್ಜೆಯಲ್ಲೂ ವಿಜ್ಞಾನ ಮಿಳಿತ: ಡಾ. ದಿಲೀಪ್


ಮೈಸೂರು: ವಿದ್ಯಾರ್ಥಿಗಳು ಕುತೂಹಲ ಮತ್ತು ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಅಪೋಲೋ ಆಸ್ಪತ್ರೆಯ ವೈದ್ಯ ಡಾ. ದಿಲೀಪ್ ಹೇಳಿದರು. ನಗರದ ವಿಜಯ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೀವನದ ಪ್ರತಿ ಹೆಜ್ಜೆಯಲ್ಲೂ ವಿಜ್ಞಾನ ಹಾಸು ಹೊಕ್ಕಾಗಿದೆ. ನಾವು ಕುತೂಹಲ ಮತ್ತು ವೈಚಾರಿಕತೆಯನ್ನು ಬೆಳಸಿಕೊಳ್ಳಬೇಕಷ್ಟೆ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಮಾತನಾಡಿ, ವಿಜ್ಞಾನದ ಬೆಳವಣಿಗೆ ಮತ್ತು ಸಂಶೋಧನೆಗಳು ಸಮಾಜದ ಸುಖ ಮತ್ತು ಒಳಿತಿಗಾಗಿ ಬಳಕೆ ಆಗಬೇಕು ಎಂದು ಕರೆ ನೀಡಿದರು.ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ರಶ್ಮಿ, ಮತ್ತು ಭೌತಶಾಸ್ತ್ರ ಉಪನ್ಯಾಸಕ ಕಿರಣ್ ಅಯ್ಯರ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement