ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜೆಡಿಎಸ್ ಅಭ್ಯರ್ಥಿ ಪ್ರಕಾಶ್ ಗೆಲವು ಖಚಿತ'

Rashmi Kasaragodu
Updated On : 2 Mar 2014, 1:41 am

ಕೆ.ಆರ್. ನಗರ: ಶಾಸಕ ಸಾ.ರಾ.ಮಹೇಶ್ ಅವರು ಕಳೆದ ಆರು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಜನರು ಮೆಚ್ಚಿಕೊಂಡಿದ್ದು ಪುರಸಭೆಯ 15ನೆ ವಾರ್ಡ್ ಉಪ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಟಿ.ಎಸ್. ಪ್ರಕಾಶ್ ಅವರಿಗೆ ಮತದಾರರು ಬೆಂಬಲ ನೀಡಲಿದ್ದಾರೆ ಎಂದು ನಗರ ಜೆಡಿಎಸ್ ಅಧ್ಯಕ್ಷ ಡಿ.ಸಿ. ಮಂಜು ಹೇಳಿದರು. ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿ ಮಾತನಾಡಿದ ಅವರು, ಪಟ್ಟಣದ ಅಭಿವೃದ್ಧಿಗೆ ಕೋಟ್ಯಂತರ ರು. ಅನುದಾನ ತಂದಿರುವ ಶಾಸಕರು ಒಳ ಚರಂಡಿ ಕಾಮಗಾರಿ ಸೇರಿದಂತೆ ಹತ್ತಾರು ಶಾಶ್ವತ ಕಾಮಗಾರಿಗಳನ್ನು ಮಾಡಿಸಿದ್ದು ಇವುಗಳು ಗೆಲುವಿಗೆ ಸಹಕಾರಿಯಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತ್ರಿಮೂರ್ತಿ ಶಿವಜಯಂತಿ


ಸಾಲಿಗ್ರಾಮ: ಮಾನವನ ಶಾಂತಿಗಾಗಿ ಆತ್ಮನ ಪವಿತ್ರತೆ ಅವಶ್ಯಕ. ನಾವು ಒಳ್ಳೆಯ ಭಾವನೆಯನ್ನು ಭಾವಿಸಬೇಕು, ಒಳ್ಳೆಯ ಮಾತುಗಳನ್ನು ಆಡಬೇಕು, ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಅದರ ಸಲುವಾಗಿ ಶಿವಜ್ಞಾನ ಅಗತ್ಯ ಎಂದು ಬ್ರಹ್ಮಕುಮಾರ ಎಸ್.ಬಿ. ಗುಣಚಂದ್ರ ಕುಮಾರ್ ಹೇಳಿದರು. ಪಟ್ಟಣದ ಮಹಾವೀರ ರಸ್ತೆಯಲ್ಲಿರುವ ಗಾಂಧಿವೃತ್ತದ ಬಳಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ 78ನೇ ತ್ರಿಮೂರ್ತಿ ಶಿವಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಜ್ಞಾನದಿಂದ ಮಾನವರು ಅಶಾಂತಿ, ದು:ಖ, ಮಾನಸಿಕ ಹಿಂಸೆಯಿಂದ ಬಳಲುತ್ತಿದ್ದಾರೆ. ಶಿವಜ್ಞಾನದಿಂದ ಜೀವನದಲ್ಲಿ ತ್ಯಾಗ, ತಾಳ್ಮೆ, ಸೇವೆ, ವಿಶ್ವಾಸವೆಂಬ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.


ಮೈಸೂರು ವಿವಿ ವಿರುದ್ಧ ಸರ್ಕಾರಕ್ಕೆ ದೂರು


ಮೈಸೂರು: ಮೈಸೂರು ವಿವಿ ಬಹದ್ಧೂರ್ ನಿರ್ವಹಣಾ ವಿಜ್ಞಾನ ಸಂಸ್ಥೆ ವಿಭಾಗದ ಪ್ರಾಧ್ಯಾಪಕ ಬಿ. ಶಿವರಾಜ್ ವಿರುದ್ಧ ಆರೋಪ ಸಾಬೀತಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಮೈಸೂರು ವಿವಿ ವಿರುದ್ಧ ಆರ್.ಎನ್. ಸತ್ಯನಾರಾಯಣ್ ಎಂಬುವರು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಶಿವರಾಜ್ ಸರ್ಕಾರದ ಗಮನಕ್ಕೆ ತರದೆ  ಸಿಸ್ತಾನ್ ಮತ್ತು ಬಲೂಚಿಸ್ತಾನ್ ವಿವಿಯೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆ ಕಾನೂನಿಗೆ ವಿರುದ್ಧವಾಗಿದೆ. ಆದ್ದರಿಂದ ಸೂಕ್ತ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ದಾಖಲೆ ಸಹಿತ 13.10.2012 ರಂದು ತಮಗೆ ದೂರು ನೀಡಿದ್ದೆ. ಅದನ್ನು ಆಧರಿಸಿ ತಾವು ಮೈಸೂರು ವಿವಿಗೆ ಸೂಚನೆ ನೀಡಿದ್ದೀರಿ. ಆದರೆ, ಈವರೆಗೆ ವಿವಿ ಆಡಳಿತ ಮಂಡಳಿ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿದೆ. ನಾನು ದೂರು ನೀಡಿ 16 ತಿಂಗಳು ಕಳೆದಿದ್ದು, ಡಿಒ ಪತ್ರದಂತೆ ಮೈಸೂರು ವಿವಿ ಕುಲಸಚಿವರು ಆಮೆ ವೇಗದಲ್ಲಿ ವಿಚಾರಣೆ ನಡೆಸುತ್ತಿದ್ದಾರೆಂದು ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement