ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪುಸ್ತಕಂ ಹಸ್ತಭೂಷಣಂ: ಡಾ. ಅನಂತರಾಮು

Rashmi Kasaragodu
Updated On : 2 Mar 2014, 1:42 am

ಮೈಸೂರು: ಪುಸ್ತಕ ಸಂಸ್ಕೃತಿ ಎಂದಿಗೂ ಅಳಿಸುವುದಿಲ್ಲ. ಎಲ್ಲಿಯವರೆಗೆ ಪುಸ್ತಕಂ ಹಸ್ತಭೂಷಣಂ ಎಂಬ ವಾಕ್ಯವನ್ನು ಪರಿಪಾಲಿಸುತ್ತೇವೆಯೋ ಅಲ್ಲಿಯವರೆಗೆ ಈ ಸಂಸ್ಕೃತಿ ಜೀವಂತವಾಗಿರುತ್ತದೆ ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಕೆ. ಅನಂತರಾಮು ಹೇಳಿದರು. ಮೈಸೂರು ಗ್ರಂಥಪಾಲಕರ ಮತ್ತು ಮಾಹಿತಿ ವಿಜ್ಞಾನಿಗಳ ಸಂಘವು (ಮೈಲಿಸಾ) ಮೈಸೂರು ವಿವಿ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ಪುಸ್ತಕಗಳು ಅಳಿಯುತ್ತಿವೆಯೇ ಕುರಿತ ವಿಚಾರ ಗೋಷ್ಠಿಯಲ್ಲಿ ಪುಸ್ತಕ ಸಂಸ್ಕೃತಿ ಬಗ್ಗೆ ಅವರು ಮಾತನಾಡಿದರು. ವೇದಗಳನ್ನು ಗುರುಗಳು ತಮ್ಮ ಶಿಷ್ಯರಿಗೆ ಹೇಳಿಕೊಡುತ್ತಿದ್ದರು. ಕೇಳಿಸಿಕೊಳ್ಳುವ ಮೂಲಕ ಮಸ್ತಕದಲ್ಲಿ ಶ್ಲೋಕಗಳನ್ನು ಇಟ್ಟುಕೊಳ್ಳುತ್ತಿರುವ ಪರಂಪರೆ ನಮ್ಮಲ್ಲಿ ಬೆಳೆದುಬಂದಿತು. ಪುಸ್ತಕ ಸಂಸ್ಕೃತಿ ಪೋಷಿಸಿಕೊಂಡು ಬಂದವರಲ್ಲಿ ಭಾರತೀಯರೆ ಶ್ರೇಷ್ಠರು ಎಂದು ಹೇಳಿದರು.


ಪ್ರತಿ ವಿದ್ಯಾರ್ಥಿಯೂ ಗಿಡಮರ ಬೆಳೆಸಲಿ


ಮೈಸೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಸಸಿನೆಡುವುದಲ್ಲದೆ, ಅದಕ್ಕೆ ನೀರು ಗೊಬ್ಬರ ಹಾಕಿ ಪೋಷಿಸಬೇಕು ಎಂದು ಪಾಲಿಕೆ ಸದಸ್ಯ, ಉರಗ ತಜ್ಞ ಸ್ನೇಕ್ ಶ್ಯಾಮ್ ಹೇಳಿದರು. ನಗರದ ಗಂಗೋತ್ರಿ ವಿದ್ಯಾಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ  ಮಾತನಾಡಿದರು. ನೀರನ್ನು ಮಿತವಾಗಿ ಬಳಸಬೇಕು. ನಾವು ಇಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ದೇಶದ ಗಡಿ ಗಾಯುತ್ತಿರುವ ಸೈನಿಕರು ಮುಖ್ಯ ಕಾರಣ. ನಾವು ಇಂದು ಅನ್ನತಿನ್ನಲು ರೈತರು ಕಾರಣ.  ತಂದೆ-ತಾಯಿ, ಗುರುಗಳು, ಸೈನಿಕರು ಹಾಗೂ ರೈತರನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement