ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಿಬಿರಾರ್ಥಿಗಳಿಗೂ ಮುನ್ನ ನಾವು ಕಲಿಯಬೇಕಿದೆ

Rashmi Kasaragodu
Updated On : 2 Mar 2014, 1:39 am

ಮೈಸೂರು: ಭವಿಷ್ಯದ ಪ್ರಜೆಗಳಿಗೆ ಕಲಿಸಬೇಕಾದ್ದನ್ನು ನಾವು ಮೊದಲು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾವರ್ಧಕ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಬಿ. ವಾಸುದೇವ ಹೇಳಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ 2013-14ನೇ ಸಾಲಿನ 7ನೇ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಮ್ಮ ಮೂರು ವರ್ಷದ ಎನ್ಎಸ್ಎಸ್ ಅಧಿಕಾರಿಯಾಗಿ ಏನು ಕೊಡುಗೆ ನೀಡುತ್ತೀರಿ ಎಂಬುದು ಮುಖ್ಯ ಎಂದರು. ಮುಕ್ತ ವಿವಿ ಹಣಕಾಸು ಅಧಿಕಾರಿ ಪ್ರೊ.ಎಲ್. ರಾಜಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಯೋಜನಾ ಕೇಂದ್ರದ ಉಪ ಸಲಹೆಗಾರ ಖಾದ್ರಿ ನರಸಿಂಹಯ್ಯ, ಯೋಜನಾಧಿಕಾರಿ ಕಾರ್ತಿಕೇಯನ್ ಇದ್ದರು.
ವ್ಯಂಗ್ಯ ಚಿತ್ರಕಲಾ ರಚನಾ ಕಮ್ಮಟ ಆರಂಭ


ಮೈಸೂರು: ಮೈಸೂರು ವಿವಿ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರವು ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಎರಡು ದಿನಗಳ ವ್ಯಂಗ್ಯಚಿತ್ರ ಕಮ್ಮಟ ಆರಂಭವಾಯಿತು. ಮುಖ್ಯ ಅತಿಥಿ ಕಾವಾ ಡೀನ್ ವಿ.ಎ. ದೇಶಪಾಂಡೆ ಮಾತನಾಡಿ, ವ್ಯಂಗ್ಯಚಿತ್ರದ ಆಕೃತಿ ಚಿಕ್ಕದಾಗಿದ್ದರೂ ಅದರ ಪ್ರಭಾವ ಮಾತ್ರ ವ್ಯಾಪಕವಾಗಿರುತ್ತದೆ. ಅಭಿವ್ಯಕ್ತಿಯ ಪ್ರಬಲ ಮಾಧ್ಯಮವಾಗಿರುವ ವ್ಯಂಗ್ಯಚಿತ್ರ ಜನರ ಗಮನವನ್ನು ಬೇಗ ಸೆಳೆಯುತ್ತದೆ. ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಖ್ಯಾತ ವ್ಯಂಗ್ಯಚಿತ್ರ ಕಲಾವಿದರಾದ ಗುಜ್ಜಾರಪ್ಪ, ಎಸ್.ವಿ. ಪದ್ಮನಾಭ್, ಜಿ.ಎಸ್. ನಾಗನಾಥ್, ಬಾಲರಾಜ್, ಸಿಪಿಡಿಪಿಎಸ್ ನಿರ್ದೇಶಕ ಪ್ರೊ. ನಿರಂಜನ ವಾನಳ್ಳಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement