ಸಂಶೋಧನಾ ಕೇಂದ್ರದಿಂದ ರೈತರಿಗೆ ಸಲಹೆ
ಮೈಸೂರು: ರೈತರು ಕೃಷಿ ಚಟುವಟಿಕೆ ಬಗ್ಗೆ ಈ ಸಲಹೆ ಅನುರಿಸುವಂತೆ ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದರಾಜು ಹಾಗೂ ಸಹ ಸಂಶೋಧಕ ಎನ್. ನರೇಂದ್ರಬಾಬು ಹೇಳಿದ್ದಾರೆ. ಮಾವು- ಹೂ ಬಿಡುವ ವೇಳೆ ಜಿಗಿಹುಳು ಮತ್ತು ಬೂದಿ ರೋಗಕ್ಕೆ ಮಾವಿನಲ್ಲಿ ಹೂ ಬಿಡುವುದಕ್ಕೆ ಮುಂಚೆ ಹಾಗೂ ಕಾಯಿ ಕಚ್ಚಿದ ಕೂಡಲೇ ಜಿಗಿಹುಳು ಮತ್ತು ಬೂದಿ ರೋಗದ ನಿಯಂತ್ರಣಕ್ಕಾಗಿ ಗಿಡಗಳಿಗೆ 1.5 ಮಿ.ಲೀ. ರೋಗರ್ ಜೊತೆಗೆ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಿಸಿ.
ಮೆಣಸಿನಕಾಯಿ- ಹೂ ಬಿಡುವ ವೇಳೆ ಎಲೆ ಮುದುಡು ರೋಗ ಕಂಡು ಬಂದಾಗ ಮೊದಲಿಗೆ ರೋಗ ಬಂದ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ನಂತರ 0.6 ಮಿ.ಲೀ. ಇಮಿಡೋಕ್ಸೊಪ್ರಿಡ್ ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಬತ್ತ ಬೆಳೆಯುವ ಪ್ರದೇಶದಲ್ಲಿ ಸಾಮಾನ್ಯವಾಗಿ ಸತುವಿನ ಕೊರತೆ ಬಹಳಷ್ಟು ಮಣ್ಣುಗಳಲಲ್ಲಿ ಕಂಡು ಬರುವುದರಿಂದ ಸತುವಿನ ಸಲ್ಫೇಟನ್ನು ಬತ್ತದ ಬೇಸಾಯದಲ್ಲಿ ಉಪಯೋಗಿಸುವುದು ಸೂಕ್ತ ಎಂದು ಕ್ಷೇತ್ರಾಧೀಕ್ಷಕರು ತಿಳಿಸಿದ್ದಾರೆ.