ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

3110 ಗ್ಯಾಂಗ್‌ಮೆನ್ ಕಾಯಂ ಮಾಡಿ

Mainashree
Updated On : 2 Mar 2014, 10:52 am

ಮೈಸೂರು: ಕೆಪಿಟಿಸಿಎಲ್‌ನಲ್ಲಿ ಗ್ಯಾಂಗ್‌ಮ್ಯಾನ್‌ಗಳಾಗಿ ಕಾರ್ಯ ನಿರ್ವಹಿಸುತ್ತಿರುವ 3110 ಮಂದಿಯನ್ನು ಕಾಯಂಗೊಳಿಸಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಟಿ. ನರಸೀಪುರ ತಾಲೂಕು ಘಟಕದ ಅಧ್ಯಕ್ಷ ಸಿ. ಪುಟ್ಟಮಲ್ಲಯ್ಯ ಆಗ್ರಹಿಸಿದರು.
ಕೆಪಿಟಿಸಿಎಲ್, ಇಂಧನ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರ ಭರ್ತಿ ಮಾಡಲು ಕ್ರಮ ವಹಿಸುವುದಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿರುವುದು ಸ್ವಾಗತಾರ್ಹ. 2004-05ನೇ ಸಾಲಿನಲ್ಲಿ ನೇಮಕವಾದ 3110 ಗ್ಯಾಂಗ್‌ಮ್ಯಾನ್‌ಗಳನ್ನು ಮತ್ತೆ ನೇಮಿಸಿ ಮಜ್ದೂರುಗಳಾಗಿ ಪರಿವರ್ತಿಸಿ ಕಾಯಂಗೊಳಿಸಬೇಕು ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸೆಸ್ಕ್, ಮೆಸ್ಕಾಂ, ಹೆಸ್ಕಾಂ ವ್ಯಾಪ್ತಿಯಲ್ಲಿ 3110 ಮಂದಿ ಗ್ಯಾಂಗ್‌ಮೆನ್ ನೇಮಿಸಿಕೊಂಡು, 2008ರವರೆಗೆ ದುಡಿಸಿಕೊಂಡು 3038 ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ. ಉಳಿದಂತೆ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಕಾವೇರಿ ಭವನ ಹಾಗೂ ಗೆಸ್ಕಾಂಗಳಲ್ಲಿ ತಲಾ 72 ಅಭ್ಯರ್ಥಿಗಳು ಈವರೆಗೂ ಮುಂದುವರಿದಿದ್ದಾರೆ. ಕೆಲಸದಿಂದ ತೆಗೆದು ಹಾಕಿರುವ 3038 ಮಂದಿಯನ್ನು ಪುನರ್ ನೇಮಕ ಮಾಡಿ ಅವರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ತಿಳಿಸಿದರು.
ಮುಖಂಡರಾದ ಪುಟ್ಟರಾಜು, ಕೆಂಪಣ್ಣ, ಅಬ್ದುಲ್ ಜಮೀಲ್, ಸಿದ್ದರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement