ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

5ರಿಂದ ಮರಳು ಲಾರಿ ಮಾಲೀಕರ ಮುಷ್ಕರ

Mainashree
Updated On : 2 Mar 2014, 10:43 am

ಟಿ. ನರಸೀಪುರ: ಮರಳು ಸಾಗಾಣಿಕೆ ಪರ್ಮಿಟ್‌ಅನ್ನು ಸ್ಥಳೀಯರಿಗೆ ಸಮರ್ಪಕವಾಗಿ ನೀಡದೆ, ಆನ್‌ಲೈನ್ ಮೂಲಕ ವಿತರಣೆ ಮಾಡಲು ಹೊರಟಿರುವ ಸರ್ಕಾರ ಹಾಗೂ ಜಿಲ್ಲಾಡಳಿತದ ಕ್ರಮ ಖಂಡಿಸಿ ಮಾ.5ರಿಂದ ಮುಷ್ಕರ ನಡೆಸಲಾಗುವುದು ಎಂದು ತಾಲೂಕು ಲಾರಿ ಮಾಲೀಕರ ಒಕ್ಕೂಟ ಹಾಗೂ ಲೈಲ್ಯಾಂಡ್ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಲ್. ರವಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಲಾರಿ ಮಾಲೀಕರ ಸಭೆಯಲ್ಲಿ ಮಾತನಾಡಿ, ಆನ್‌ಲೈನ್‌ನಲ್ಲಿ ಪರ್ಮಿಟ್ ಪಡೆಯುವಂತಾದರೆ ಸ್ಥಳೀಯವಾಗಿ ನದಿ ಪಾತ್ರದಲ್ಲಿ ದೊರೆಯುವ ಮರಳು ನಿಕ್ಷೇಪವನ್ನು ಸಾಗಾಣಿಕೆ ಮಾಡುವ ಅವಕಾಶ ತಾಲೂಕಿನ ಲಾರಿ ಮಾಲೀಕರಿಗೆ ಕೈತಪ್ಪಿ ಹೋಗಲಿದೆ. ಇದರಿಂದಾಗಿ ಜೀವನ ನಿರ್ವಹಣೆಗೆ ಲಾರಿ ಅವಲಂಬಿಸಿದವರ ಬದುಕು ದುಸ್ತರವಾಗಲಿದೆ ಎಂದರು.
ಏಕಾಏಕಿ ಮರಳಿನ ಪರವಾನಗಿ ದರ ಏರಿಕೆ ಮಾಡಿರುವುದರಿಂದ 11 ಕ್ಯೂಬಿಕ್ ಮರಳು ನೀಡಬೇಕು. ತಾಲೂಕಿನ ಸ್ಥಳೀಯ ಲಾರಿ ಮಾಲೀಕರಿಗೆ ಪ್ರಾತಿನಿಧ್ಯ ಕೊಟ್ಟು, ಪ್ರತಿನಿತ್ಯ ಒಂದು ಪರ್ಮಿಟ್ ವಿತರಿಸುವುದು ಸೇರಿದಂತೆ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರ ಹಿಂಪಡೆಯುದಿಲ್ಲ. ಮಾ.5ರಿಂದ ನರಸೀಪುರ ಲೋಕೋಪಯೋಗಿ ಕಚೇರಿ ಆವರಣದಲ್ಲಿಯೇ ಲಾರಿಗಳೊಂದಿಗೆ ಮುಷ್ಕರ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಟಿಪ್ಪರ್ ಲಾರಿ ಮಾಲೀಕರ ಸಂಘದ ಎಂ. ಪರಶಿವಮೂರ್ತಿ ಮಾತನಾಡಿ, ಮರಳು ಸಾಗಾಣಿಕೆಗೆ ಸಮರ್ಪಕವಾಗಿ ಪರ್ಮಿಟ್ ವಿತರಣೆ ಮಾಡುವುದರಿಂದ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಸಿಗುವುದಿಲ್ಲ. ಈ ಹಿಂದೆ ಲೋಕೋಪಯೋಗಿ ಕಚೇರಿಯಲ್ಲಿ ನೀಡುತ್ತಿದ್ದಂತೆಯೇ ಪರ್ಮಿಟನ್ನು ವಿತರಣೆ ಮಾಡಬೇಕು. ಸರ್ಕಾರ ಹಾಗೂ ಜಿಲ್ಲಾಡಳಿತ ಮೊದಲು ಆನ್‌ಲೈನ್ ಪದ್ಧತಿಯನ್ನು ಕೈ ಬಿಡಬೇಕು ಎಂದರು.
ಗುತ್ತಿಗೆದಾರ ಹಿರಿಯೂರು ಪರಶಿವಮೂರ್ತಿ, ಲೈಲ್ಯಾಂಡ್ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಕೆಂಪಯ್ಯನಹುಂಡಿ ನವೀನ್, ಬಾಲಕೃಷ್ಣ, ಗುತ್ತಿಗೆದಾರ ಸುಗಂಧರಾಜು, ವಿಜಾಪುರ ಶಿವಶಂಕರ್, ಎಂ.ಆರ್. ಅಶೋಕ್, ಸಾಗರ್, ಗಿರಿ, ಮಂಜು, ದೊಡ್‌ಡಪುರ ಪುಟ್ಟು, ವೃಷಬೇಂದ್ರ, ಸ್ವಾಮಿ, ಮಂಜು, ಕಾಂತರಾಜು, ವಿನೋದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement