ಕಣಗಾಲಲ್ಲಿ ಶನೈಶ್ಚರ ವಿಗ್ರಹ ಪ್ರತಿಷ್ಠಾಪನೆ
ಪಿರಿಯಾಪಟ್ಟಣ: ತಾಲೂಕಿನ ಕಣಗಾಲು ಗ್ರಾಮದಲ್ಲಿ ಬಲಿಜ ಸಂಘ ಹಾಗೂ ಶನೈಶ್ಚರ ದೇವಾಲಯ ಸಮಿತಿ ವತಿಯಿಂದ ಶನೀಶ್ವರಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಹಾಗೂ 26ನೇ ವರ್ಷದ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಗ್ರಾಮದ ಸಮೀಪವಿರುವ ಕಾವೇರಿ ತೀರದಿಂದ ಕಳಸ ಹೊತ್ತ ಮಹಿಳೆಯರು ಹಾಗೂ ಮಕ್ಕಳು ವೀರಭದ್ರನ ಕುಣಿತದೊಂದಿಗೆ ಗ್ರಾಮದ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ದೇವಾಲಯದಲ್ಲಿ ವಾಸ್ತುಹೋಮ, ನವಗ್ರಹ ಹೋಮ, ಗಣಪತಿ ಹೋಮ, ಶ್ರೀಶನೀಶ್ವರ ದೇವರಿಗೆ ಪ್ರತ್ಯೇಕ ಹೋಮ ನಡೆಸಿ ವಿವಿಧ ವಿಧಿವಿದಾನಗಳ ಮೂಲಕ ಶ್ರೀಶನೈಶ್ಚರಸ್ವಾಮಿ ವಿಗ್ರಹ ಪ್ರತಿಷ್ಠಾಪಿಸಲಾಯಿತು.
56 ವರ್ಷಗಳ ಇತಿಹಾಸವಿರುವ ದೇವಾಲಯವನ್ನು ಶಾಸಕ ಕೆ. ವೆಂಕಟೇಶ್ ಅವರ ಅನುದಾನ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಅವರ ಅನುದಾನ ಹಾಗೂ ದಾನಿಗಳ ಸಹಕಾರದಿಂದ ಜೀರ್ಣೋದ್ಧಾರ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಕುಮಾರಶೆಟ್ಟಿ ತಿಳಿಸಿದರು.
ವಿಗ್ರಹದ ದಾನಿಗಳಾದ ಕರ್ನಾಟಕ ಸರ್ಕಾರಿ ನೌಕರರ ರಾಜ್ಯ ಪರಿಷತ್ ಸದಸ್ಯ ಶಿವಯೋಗಿ, ಬಲಿಜ ಸಂಘದ ಕಾರ್ಯದರ್ಶಿ ಕೆ.ವಿ. ಶೇಖರ್, ನಿವೃತ್ತ ಕೆಎಸ್‌ಆರ್‌ಟಿಸಿ ಅಧಿಕಾರಿ ಶಿವಶೆಟ್ಟಿ, ರಾಜಣ್ಣ, ಗೋವಿಂದರಾಜು, ಕುಮಾರಶೆಟ್ಟಿ, ಶರತ್‌ಕುಮಾರ್, ಅರ್ಚಕ ದಶರಥಶೆಟ್ಟಿ, ಕೆ.ಎಸ್. ಮೂರ್ತಿ, ಮಂಜುನಾಥ್ ಇದ್ದರು.