ಚರಂಡಿ ಕಾಮಗಾರಿಗೆ ಚಾಲನೆ
ಮೈಸೂರು: ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ವಾರ್ಡ್ ನಂ.5ರಲ್ಲಿನ ಚಾಮುಂಡಿಪುರಂನ ರಸ್ತೆಯಿಂದ ಗುಂಡೂರಾವ್ ನಗರದವರೆಗೆ ಚರಂಡಿ ನಿರ್ಮಾಣದ ಕಾಮಗಾರಿಗೆ ಶಾಸಕ ಎಂ.ಕೆ. ಸೋಮಶೇಖರ್ ಭಾನುವಾರ ಗುದ್ದಲಿಪೂಜೆ ನೆರವೇರಿಸಿದರು.
ಸದರಿ ಕಾಮಗಾರಿಯನ್ನು ಅಂದಾಜು 1 ಕೋಟಿ ವೆಚ್ಚದಲ್ಲಿ ಕೆಗೆತ್ತಿಕೊಳ್ಳಲಾಗುತ್ತಿದೆ.
ಇದೇ ವೇಳೆ ಪಾಲಿಕೆ ಸದಸ್ಯೆ ರತ್ನಮ್ಮ ವೀರೇಂದ್ರಸ್ವಾಮಿ, ಅಧೀಕ್ಷಕ ಎಂಜಿನಿಯರ್ ಕೃಷ್ಣ, ಕಾರ್ಯಪಾಲಕ ಎಂಜಿನಿಯರ್ ನಾಗರಾಜಮೂರ್ತಿ, ಸಹಾಯಕ ಆಯುಕ್ತ ಕೆ.ಎನ್. ಜಗದೀಶ್, ಸಹಾಯಕ ಎಂಜಿನಿಯರ್ ಮಹೇಶ್, ಗುತ್ತಿಗೆದಾರ ಪಿ. ವೆಂಕಟಸುಬ್ಬಯ್ಯ ಇದ್ದರು.