ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನೀರು ಉಳಿಸಲು ಮ್ಯಾರಥಾನ್

Mainashree
Updated On : 2 Mar 2014, 10:53 am

ಮೈಸೂರು: ನಗರದಲ್ಲಿ ನೀರನ್ನು ಉಳಿಸುವ ಶಪಥ ವಿಷಯ ಕುರಿತು 6 ಕಿ.ಮೀ. ಮ್ಯಾರಥಾನ್ ಮತ್ತು ವಾಕಾಥಾನ್ ಅನ್ನು ಭಾನುವಾರ ಆಯೋಜಿಸಲಾಗಿತ್ತು.
ಮೈಸೂರು ಚಾಪ್ಟರ್ ಆಫ್ ದಿ ಇನ್ಸ್‌ಟಿಟ್ಯೂಚ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾದ ಇ-ನ್ಯೂಸ್ ಲೆಟರ್ ಪ್ರಕಾಶನದ 10ನೇ ವರ್ಷ ಹಾಗೂ ಮೈಸೂರು ಚಾಪ್ಟರ್ ವಿದ್ಯಾರ್ಥಿಗಳ ಉಮಾಂಗ್ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು
 ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಈ ಕಾರ್ಯಕ್ರಮಕ್ಕೆ ಉಪ ಮೇಯರ್ ವಿ. ಶೈಲೇಂದ್ರ ಚಾಲನೆ ನೀಡಿದರು.
ದೊಡ್ಡ ಗಡಿಯಾರ, ಗಾಂಧಿ ಚೌಕ, ಚಿಕ್ಕಗಡಿಯಾರ, ದೇವರಾಜ ಅರಸು ರಸ್ತೆ, ಜಿಲ್ಲಾಧಿಕಾರಿ ಕಚೇರಿ, ಓವೆಲ್ ಮೈದಾನ, ಎಂಡಿಎ ವೃತ್ತ, ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ ಮೂಲಕ ಸಾಗಿದ ಅರಮನೆ ಆವರಣದಲ್ಲಿ ಅಂತ್ಯಗೊಂಡಿತ್ತು.
ಸಂಸ್ಥೆಯ ಅಧ್ಯಕ್ಷ ಅಜಯ್ ಮಾದಯ್ಯ, ಕಾರ್ಯಕ್ರಮ ಸಂಯೋಜಕ ಫಣೀಶ್, ಸದಸ್ಯರಾದ ಸಿ.ಎಸ್. ಶಬರೀಸ್, ಭಾಗ್ಯ, ಕಿರಣ್, ಎಂ.ಸಿ. ಕಿರಣ್, ಸುನಿಲ್‌ಕುಮಾರ್, ಬಾಲಕೃಷ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement