ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವೃತ್ತಿಪರ ಕ್ಷೇತ್ರವಾಗುತ್ತಿರುವ ಸಿನಿಮಾ: ವಿಜಯ ರಾಘವೇಂದ್ರ

Mainashree
Updated On : 2 Mar 2014, 10:42 am

ಮೈಸೂರು: ಹಿಂದೆ ಬೇರೆ ಬೇರೆ ವೃತ್ತಿ ಮಾಡಿಕೊಂಡಿದ್ದವರು ಸಿನಿಮಾವನ್ನು ಪ್ರವೃತ್ತಿಯಾಗಿ ಸ್ವೀಕರಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸಿನೆಮಾ ಕ್ಷೇತ್ರವನ್ನೇ ವೃತ್ತಿಯನ್ನಾಗಿ ಆರಿಸಿಕೊಳ್ಳಲಾಗುತ್ತಿದೆ ಎಂದು ನಟ ವಿಜಯ ರಾಘವೇಂದ್ರ ಹೇಳಿದರು.
ಭಾನುವಾರ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ನಡೆದ ಬ್ಲಿಸ್ ಕಿರುಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಅಭಿವೃದ್ಧಿಗೊಂಡ ತಂತ್ರಜ್ಞಾನ ಬಳಸಿಕೊಂಡು ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂದು ಯುವಜನರು ಬರುತ್ತಿದ್ದಾರೆ. ಸಿನೆಮಾಗೆ ಅಗತ್ಯ ಜ್ಞಾನ ನೀಡುವ ಸಂಸ್ಥೆಗಳು ಹುಟ್ಟಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಸಿನಿಮಾ ಯಶಸ್ವಿಯಾಗಲು ಪ್ರೇಕ್ಷಕರೇ ಕಾರಣ. ನಟರು, ತಂತ್ರಜ್ಞರು, ಕಲಾವಿದರಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಪ್ರೇಕ್ಷಕರು ಮಾಡಿಕೊಂಡು ಬಂದಿದ್ದಾರೆ. ನಿರ್ದೇಶನ, ನಟನೆ, ಛಾಯಾಗ್ರಹಣ ಮುಂತಾದವುಗಳ ಬಗ್ಗೆ ತರಬೇತಿ ನೀಡಲು ಸಂಸ್ಥೆಗಳು ಹುಟ್ಟಿಕೊಳ್ಳಲಿ ಎಂದು ಅವರು ಆಶಿಸಿದರು. ಗ್ರೂಪ್ ಡ್ಯಾನ್ಸ್ ಪ್ರಶಸ್ತಿಯನ್ನು ಬ್ಲೂ ಡ್ಯಾನ್ಸ್ ಸ್ಟುಡಿಯೋಸ್ ಮತ್ತು ಪಾವನ ಗ್ರೂಪ್ಸ್ ತಂಡಕ್ಕೆ, ಬೆಲ್ಲಿ ಡ್ಯಾನ್ಸ್ ಪ್ರಶಸ್ತಿಯನ್ನು ಸುಶ್ಮಿತ, ಮ್ಯೂಸಿಕಲ್ ಲೈವ್ ಪರ್ಫಾರ್ಮೆನ್ಸ್ ಪ್ರಶಸ್ತಿಯನ್ನು ಶೋ ಆಫ್ ತಂಡಕ್ಕೆ ವಿತರಿಸಲಾಯಿತು. ಬ್ಲಿಸ್ ಕಿರುಚಿತ್ರಗಳ ಪ್ರಶಸ್ತಿ ಸ್ಪರ್ಧೆಯಲ್ಲಿ ಕುಬೇರ ನಿರ್ದೇಶನದ ಲವ್ ಫೆಲ್ಯೂರ್ ಕಿರುಚಿತ್ರ ಪ್ರಥಮ, ಪ್ರಕಾಶ್ ಹಾಸನ ನಿರ್ದೇಶನದ ನಮ್ ಊರೇ ನಮ್‌ಗೆ ಸವಿಬೆಲ್ಲ ಕಿರುಚಿತ್ರಕ್ಕೆ ದ್ವಿತೀಯ ಬಹುಮಾನ ಪಡೆಯಿತು. ವಿಜೇತ ತಂಡಗಳಿಗೆ ನಟ ಶಂಕರ್ ಅಶ್ವಥ್ ಬಹುಮಾನ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement