ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸೋಮೇಶ್ವರ ದೇಗುಲದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

Mainashree
Updated On : 2 Mar 2014, 10:43 am

ಹುಣಸೂರು: ಮಹಾಶಿವರಾತ್ರಿಯ ಜಾಗರಣೆ ಆಚರಣೆ ಪ್ರಯುಕ್ತ ತಾಲೂಕಿನ ಗದ್ದಿಗೆಯ ಸೋಮೇಶ್ವರ ದೇವಸ್ಥಾನದಲ್ಲಿ ಸುತ್ತಮುತ್ತಲ ಗ್ರಾಮದ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ನಾಗರಾಜ್ ಮತ್ತು ಯುವಕ ಮಿತ್ರರ ತಂಡ ಆಯೋಜಿಸಿದ್ದ ನೃತ್ಯ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಶ ಭಕ್ತಿಗೀತೆ, ಚಲನಚಿತ್ರ ಗೀತೆ, ಜಾನಪದ ಗೀತೆಗಳಿಗೆ ಹೆಜ್ಜೆ ಹಾಕಿದರು. ವಿದ್ಯಾರ್ಥಿನಿಯರು ನಡೆಸಿಕೊಟ್ಟ ಕೋಲಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕರಿಮುದ್ದನಹಳ್ಳಿ ಕಿ.ಪ್ರಾ. ಶಾಲೆ (ಪ್ರಥಮ), ಆದಿಚುಂಚನಗಿರಿ ಶಾಲೆ (ದ್ವಿತೀಯ) ಹಾಗೂ ಚಿಕ್ಕಕೆರೆಯೂರು ಶಾಲೆ (ತೃತೀಯ) ಸ್ಥಾನ ಪಡೆಯಿತು. ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಸವನಹಳ್ಳಿ ಶಾಲೆ (ಪ್ರಥಮ), ಕರಿಮುದ್ದನಹಳ್ಳಿ ಶಾಲೆ (ದ್ವಿತೀಯ), ಪಡುವಕೋಟೆ ಶಾಲೆ (ತೃತೀಯ) ಸ್ಥಾನ ಪಡೆಯಿತು. ಜಿಪಂ ಮಾಜಿ ಸದಸ್ಯ ಕೆ.ಟಿ. ಗೋಪಾಲ್, ತಾಪಂ ಮಾಜಿ ಸದಸ್ಯ ಸೂರ್ಯಕುಮಾರ್, ಎಪಿಎಂಸಿ ಸದಸ್ಯ ರವೀಂದ್ರ, ವಿಎಸ್‌ಎಸ್ ಕಾಲೇಜಿನ ಕನ್ನಡ ಅಧ್ಯಾಪಕ ಎಂ. ರವಿ, ಅರ್ಥಶಾಸ್ತ್ರ ಉಪನ್ಯಾಸಕ ತೊಳಸಿಪ್ರಸಾದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement