ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸರಗೂರು ಪಪಂಗೆ 23 ಲಕ್ಷ ಉಳಿತಾಯ ಬಜೆಟ್

Vishwanath S
Updated On : 6 Mar 2014, 12:57 pm

ಸರಗೂರು: ಪಪಂ ಅಧ್ಯಕ್ಷೆ ಬಿ. ಪದ್ಮಾ ಶ್ರೀನಿವಾಸ್ 2014-15ನೇ ಸಾಲಿನ 23.47 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.
ಪಟ್ಟಣದ ಬಿಪಿಎಲ್ ಕಾರ್ಡ್‌ದಾರರು ಮರಣ ಹೊಂದಿದರೆ ಅಂತ್ಯ ಸಂಸ್ಕಾರಕ್ಕೆ 1000 ನೀಡಲಾಗುತ್ತದೆ. ನಂಜನಗೂಡು ರಸ್ತೆ ಮತ್ತು ತುಂಬಸೋಗೆ ಸೇತುವೆ ಬಳಿ ಸ್ವಾಗತ ಕಮಾನು ಹಾಕಲಾಗುತ್ತದೆ. ಪಟ್ಟಣದ 11 ವಾರ್ಡ್‌ಗಳಿಗೂ ನಾಮಫಲಕ ಹಾಕಲಾಗುತ್ತದೆ. ಎಸ್‌ಎಫ್‌ಸಿ ವಿಶೇಷ ಯೋಜನೆಯಲ್ಲಿ 1 ಕೋಟಿ ಹಣ ಅನುದಾನದಲ್ಲಿ ನೂತನ ಪಪಂ ಕಟ್ಟಡ ನಿರ್ಮಿಸಲು ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಶಾಸಕ ಎಸ್. ಚಿಕ್ಕಮಾದು ಮಾತನಾಡಿ, ಈ ಸಾಲಿನ ಬಜೆಟ್‌ನ್ನು ಪಪಂ ಅಧ್ಯಕ್ಷೆ ಬಿ.ಪದ್ಮಾ ಶ್ರೀನಿವಾಸ್ ಮತ್ತು ಸದಸ್ಯರ ಒಮ್ಮತದಿಂದ ಉತ್ತಮವಾಗಿ ಮಂಡಿಸಿದ್ದಾರೆ. ಪಪಂ ಖಾಲಿ ನಿವೇಶನಗಳಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ ಪಪಂಗೆ ಶಾಶ್ವತ ಆದಾಯ ಬರುವ ಹಾಗೆ ಮಾಡಬೇಕು. ಎಲ್ಲ ಸದಸ್ಯರು ಓಮ್ಮತದಿಂದ 6 ತಿಂಗಳಲ್ಲಿ ಉತ್ತಮ ಕೆಲಸ ಮಾಡುವಂತೆ ಸಲಹೆ ನೀಡಿದರು.
ನೂತನವಾಗಿ ಸರಗೂರು ಪಪಂ ನಾಮ ನಿರ್ದೇಶನ ಸದಸ್ಯರಾದ ರಂಗನಾಥ, ಗೋವಿಂದರಾಜು, ಸುಶೀಲ ಅವರನ್ನು ಸಭೆಯಲ್ಲಿ ಚಿಕ್ಕಮಾದು ಹಾಗೂ ಮುಖ್ಯಾಧಿಕಾರಿ ಕರಿಬಸವಯ್ಯ ಅಭಿನಂದಿಸಿದರು.
ಪಪಂ ಉಪಾಧ್ಯಕ್ಷೆ ಸುಗುಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುನಂದರಾಜು, ಸದಸ್ಯ ಎಸ್.ಎನ್. ನಾಗರಾಜು, ಎಸ್.ಎಚ್. ಜಯರಾಮ, ನಾಗರಾಜರಾಮ, ಕಲೀಲ್, ಬೆಳಗಮ್ಮ, ರೂಪ, ರಂಗನಾಥ್, ಗೋವಿಂದರಾಜು, ಸುಶೀಲ, ಪಪಂ ಮುಖ್ಯಾಧಿಕಾರಿ ಕರಿಬಸವಯ್ಯ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement