ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಿಜೆಪಿ ಗೆಲವು ಖಚಿತ: ಹೊನ್ನಪ್ಪ ವಿಶ್ವಾಸ

Vishwanath S
Updated On : 7 Mar 2014, 12:17 pm

ಕೆ.ಆರ್. ನಗರ: 10 ವರ್ಷದಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಯುಪಿಎ ಮೈತ್ರಿ ಕೂಟದ ಕಾಂಗ್ರೆಸ್ ಸರ್ಕಾರದ  ದುರಾಡಳಿತದಿಂದ ದೇಶದ ಜನತೆ ಬೇಸತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನಾಯಕತ್ವ ಮತ್ತು ಬಿಜೆಪಿಯನ್ನು ಬಿಂಬಲಿಸಲಿದ್ದಾರೆ ಎಂದು ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್. ಹೊನ್ನಪ್ಪ ಹೇಳಿದರು.
ಪಟ್ಟಣದ ಪಕ್ಷದ ಕಚೇರಿಗೆ ಗುರುವಾರ ಭೇಟಿ ನೀಡಿ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ವೈಖರಿಯಿಂದ ರಾಜ್ಯದ ಜನತೆ ಆಸಮಾಧಾನಿತರಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಮೋದಿ ದೇಶದ ಪ್ರಧಾನಿಯಾದರೆ ಗುಜರಾತ್ ಮಾದರಿಯ ಆಡಳಿತ ದೇಶಕ್ಕೆ ಲಭಿಸಲಿದ್ದು, ಅವರ ಸಮರ್ಥ ನಾಯಕತ್ವದಲ್ಲಿ ಭಾರತ ವಿಶ್ವದಲ್ಲಿಯೆ ಅಗ್ರಗಣ್ಯ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಜಿಲ್ಲಾ ಜಿಜೆಪಿ ರೈತ ಮೋರ್ಚಾ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಕಾರ್ಯದರ್ಶಿ ಪ್ರಭಾಕರ್‌ಜೈನ್,  ಉಪಾಧ್ಯಕ್ಷರಾದ ಕೆ.ಎಸ್. ಸುರೇಶ್, ನಂಜುಂಡಸ್ವಾಮಿ, ಪ್ರವೀಣ, ಮುಖಂಡರಾದ ಅನಿಲ್‌ಕುಮಾರ್, ಸಂತೋಷ್, ಉಮೇಶ್, ಮೋಹನ್‌ಕುಮಾರ್, ಚಲುವರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement