ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿಜ್ಞಾನ, ತಂತ್ರಜ್ಞಾನದಿಂದ ಪ್ರಗತಿ: ಬಾತ್ರಾ

Vishwanath S
Updated On : 7 Mar 2014, 12:13 pm

ಕ.ಪ್ರ.ವಾರ್ತೆ ,  ಮೈಸೂರು ,  ಮಾ. 6
ದೇಶದ ಪ್ರಗತಿಗೆ ವಿಜ್ಞಾನ ಹಾಗೂ ತಂತ್ರಜ್ಞಾನ ಪೂರಕ ಎಂದು ರಕ್ಷಣಾ ಆಹಾರ ಸಂಶೋಧನಾಲಯದ ನಿರ್ದೇಶಕ ಡಾ.ಎಚ್.ವಿ. ಬಾತ್ರಾ ಹೇಳಿದರು.
ಯುವರಾಜ ಕಾಲೇಜು ವತಿಯಿಂದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಯುರೇಕಾ ವಿಜ್ಞಾನ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ, ಆರ್ಥಿಕ ಹಾಗೂ ಸಾಮಾಜಿಕ ಮುಂತಾದ ವಲಯಗಳ ಬೆಳವಣಿಗೆಗೆ ವಿಜ್ಞಾನ ಹಾಗೂ ತಂತ್ರಜ್ಞಾನದ ಕೊಡುಗೆ ಅಪಾರ. ಸ್ವಯಂ ಶಿಸ್ತು ಹಾಗೂ ಸ್ವಯಂ ಪ್ರೇರಣೆಯಿಂದ ಮಾತ್ರ ಈ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ವಿಜ್ಞಾನವನ್ನು ಆಸಕ್ತಿಯ ವಿಷಯವಾಗಿ ತೆಗೆದುಕೊಳ್ಳಲು ಮುಂದಾಗಬೇಕು ಎಂದರು.
ವಿಜ್ಞಾನದ ಬೆಳವಣಿಗೆಗೆ ಮೂಲ ವಿಜ್ಞಾನವನ್ನು ಅನುಸರಿಸುವುದು ಅವಶ್ಯಕ. ಯುವ ಪೀಳಿಗೆಗೆ ದೇಶ ಕಟ್ಟುವ ಜವಾಬ್ದಾರಿ ವಹಿಸಬೇಕು. ಭಾರತ ವಿಶಿಷ್ಟ ದೇಶ. ಇಂದು ಎಲ್ಲ ತರದ ಅಭಿವೃದ್ಧಿಗಳು ನಡೆಯುತ್ತಿದ್ದರೂ, ಮತ್ತೊಂದು ಕಡೆ ಬಡತನ ಹಾಗೂ ಮೂಲ ಸೌಕರ್ಯಗಳ ಕೊರತೆ ನಿವಾರಣೆಯಾಗಿಲ್ಲ ಎಂದು ವಿಷಾದಿಸಿದರು.     
ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಸ್ತುತ ಎದುರಾಗಿರುವ ಸಮಸ್ಯೆಗಳನ್ನು ಗುರುತಿಸಿ, ಆ ಸವಾಲುಗಳಿಗೆ ಪರಿಹಾರ ರೂಪಿಸುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ಕೇವಲ ತಿಳಿದಿರುವ ಜ್ಞಾನವನ್ನು ಬಿಟ್ಟು, ಸಂಪನ್ಮೂಲ ಬಳಸಿಕೊಂಡು ಹೊಸ ಅಲೋಚನೆಗಳೊಂದಿಗೆ ನವ ಸಮಾಜ ನಿರ್ಮಾಣಕ್ಕೆ ಉತ್ಸುಕರಾಗಬೇಕು ಎಂದು ಆಶಿಸಿದರು.
ಕೆಎಸ್‌ಸಿಎಸ್‌ಟಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಂ. ಪೃಥ್ವಿರಾಜ್, ಐಸಿಐಸಿ ನಿವೃತ್ತ ನಿರ್ದೇಶಕ ಪ್ರೊ.ಆರ್. ಶ್ರೀನಿವಾಸನ್ ಮುಖ್ಯ ಅತಿಥಿಗಳಾಗಿದ್ದರು. ಪ್ರಾಂಶುಪಾಲ ಡಾ.ಎಚ್. ನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎಸ್.ಎನ್. ಹೆಗಡೆ ಹಾಗೂ ಜ್ಞಾನವಾಹಿನಿ ಸಮಿತಿ ಸಂಯೋಜಕ ಪ್ರೊ. ವೈ.ಸಿ. ನಂಜುಂಡಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement