ಸಾಕ್ಷರತೆಯಿಂದ ಮಾತ್ರ ಅಭಿವೃದ್ಧಿ: ಮಂಜುನಾಥ್
ಹುಣಸೂರು: ಸಂಪೂರ್ಣ ಸಾಕ್ಷರತೆಯಿಂದ ಮಾತ್ರ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.
ತಾಲೂಕಿನ ರತ್ನಪುರಿಯ ಎಸ್.ಕೆ. ಕೋಡಿಯ ಮಂಜುನಾಥ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ, ವಿದ್ಯಾರ್ಥಿ ಸಂಚಿಕೆ ಬಿಡುಗಡೆ ಹಾಗೂ ಪೋಷಕರ ದಿನ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಶಿಕ್ಷಣ ಇಂದಿಗೂ ಗಗನಕುಸುಮವಾಗುತ್ತಿರುವ ವೇಳೆಯಲ್ಲಿ ಮಂಜುನಾಥ ವಿದ್ಯಾಸಂಸ್ಥೆಯು ಕಳೆದ 9 ವರ್ಷಗಳಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಕೇವಲ ಅಂಕ ಗಳಿಕೆಯನ್ನು ಕಲಿಸದೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿ ಅವರ ಪ್ರತಿಭೆ ಹೊರತರಬೇಕು ಎಂದು ಸಲಹೆ ನೀಡಿದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಹರೀಶ್ಗೌಡ ಮಾತನಾಡಿದರು. ಗಾವಡಗೆರೆಯ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ ವಿದ್ಯಾಸಿರಿ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿದರು. ಗಾಯಕ ಆಲೂರು ನಾಗಪ್ಪ ಜಾನಪದ ಗೀತೆಗಳನ್ನು ಹಾಡಿದರು.
ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಮಡಿಕೇರಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ವಿ. ಸುರೇಶ್, ಬಿಇಒ ರಾಜಶೇಖರ್, ಸಂಸ್ಥೆಯ ಅಧ್ಯಕ್ಷ ಗೌರಿಪುರ ಮಹದೇವ್, ನಿಯೋಜಿತ ಕ್ಷೇತ್ರ ಸಮನ್ವಯಾಧಿಕಾರಿ ತಿಮ್ಮೇಗೌಡ, ಸಿಆರ್ಪಿ ಜಯಂತಿ, ವಿದ್ಯಾಭಾರತಿ ಶಿಕ್ಷಣಸಂಸ್ಥೆಯ ಪ್ರಾಂತೀಯ ಕಾರ್ಯದರ್ಶಿ ರಘುವೀರ್ಜೀ, ಕರ್ನಾಟಕ ಪ್ರಜಾವೇದಿಕೆ ಅಧ್ಯಕ್ಷ ಪಾಂಡುಕುಮಾರ್, ಮುಖಂಡ ಅಸ್ವಾಳ್ ಕೆಂಪೇಗೌಡ, ಮುಖ್ಯಶಿಕ್ಷಕ ಕೆ.ಎಂ. ನಾಗೇಶ್ ಇದ್ದರು.