ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಣ್ಣ ಉದ್ಯಮದ ಸಾಧಕಿ ನಿಶ್ಹಾತ್ ಅಫ್ಜ

Vishwanath S
Updated On : 8 Mar 2014, 12:55 pm

ಮೈಸೂರಿನ ನಿಶ್ಹಾತ್ ಅಫ್ಜ ಸಣ್ಣ ಉದ್ಯಮ ಕ್ಷೇತ್ರದಲ್ಲಿ ಇತ್ತೀಚೆಗೆ ಹೆಸರು ಮಾಡುತ್ತಿರುವ ಸಾಧಕಿ. ವಿ.ವಿ. ಮೊಹಲ್ಲಾದ ದೇವಸ್ಥಾನ ರಸ್ತೆಯ ನಿವಾಸಿಯಾದ ಇವರು ಗುಡ್ ಶೆಪರ್ಡ್ ಕಾನ್ವೆಂಟ್‌ನಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪಡೆದರು. ಟೆರೇಷಿಯನ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಗಳಿಸಿದ್ದಾರೆ. ಕಳೆದ 25 ವರ್ಷಗಳಿಂದ ಅವರು ಸಲ್ಲಿಸುತ್ತಿರುವ ಸೇವೆಗಾಗಿ ಇಂಡೋ- ಥಾಯ್ ಸದ್ಭಾವನಾ ಪ್ರಶಸ್ತಿ, ಏಷ್ಯಾ- ಫೆಸಿಪಿಕ್ ಅಂತಾರಾಷ್ಟ್ರೀಯ ಪ್ರಶಸ್ತಿ, ಭಾರತ್ ವಿಕಾಸ ರತ್ನ ಪ್ರಶಸ್ತಿ, ಕರ್ನಾಟಕ ಭೂಷಣ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು ದೊರೆತಿವೆ. ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.  ಇವರು ಅಯ್ಮಾನ್ ಆರ್ಟ್ಸ್ ಮತ್ತು ಇಂಟಿರೀಯರ್ಸ್‌ನ ಸಂಸ್ಥಾಪಕ ನಿರ್ದೇಶಕಿ. ಈ ಸಂಸ್ಥೆಯಲ್ಲಿ ಸೃಜನಾತ್ಮಕ ಕಲೆ ಮತ್ತು ವಿನ್ಯಾಸ ಕುರಿತು ತರಬೇತಿ ನೀಡಲಾಗುತ್ತಿದೆ. ಕ್ಯೂರಿಯಾ-ಸಿಟಿ ಎಂದು ಕೂಡ ಕರೆಯಲಾಗುವ ಈ ಸಂಸ್ಥೆಯಲ್ಲಿ ಸಾಂಪ್ರದಾಯಿಕ ಕಲೆ, ಪಾಟರಿ, ಬಾಟಿಕ್, ಫ್ಯಾಷನ್ ಡಿಸೈನಿಂಗ್, ಬೋನ್ಸಾಯ್, ಸೆರಾಮಿಕ್ ವರ್ಕ್ಸ್ ತರಬೇತಿ ನೀಡಲಾಗುತ್ತಿದೆ. ಬೇಸಿಗೆಯಲ್ಲಿ ಮಕ್ಕಳಿಗೆ ಶಿಬಿರ ನಡೆಸಲಾಗುತ್ತಿದೆ. ಕಲೆ, ಕರಕುಶಲ, ಬರವಣಿಗೆ, ಕ್ಯಾಲಿಯೋಗ್ರಫಿ, ಸ್ಪೋಕನ್ ಇಂಗ್ಲಿಷ್ ನೀಡಲಾಗುತ್ತದೆ. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರಲು ಕೆಲವು ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುತ್ತಿದೆ. ಇದಕ್ಕಾಗಿ ಮೇಣದಬತ್ತಿ ತಯಾರಿಕೆ, ಹೊಲಿಗೆ ಮೊದಲಾದ ತರಬೇತಿ ನಡೆಸಲಾಗುತ್ತಿದೆ.
ಲೇಸರ್ ಅಸಿಸ್ಟೆಡ್ ಹ್ಯಾಚಿಂಗ್
ಮೈಸೂರಿನಲ್ಲಿ ಪ್ರಪ್ರಥಮ ಬಾರಿಗೆ ಡಾ॥ ಜ್ಯೋತೀಸ್ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದಲ್ಲಿ (ಪ್ರನಾಳ ಶಿಶು ಕೇಂದ್ರ) ಲೇಸರ್ ಅಸಿಸ್ಪೆಡ್ ಹ್ಯಾಚಿಂಗ್ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ.
  ಲೇಸರ್ ಅಸಿಸ್ಪೆಡ್ ಹ್ಯಾಚಿಂಗ್ ಭ್ರೂಣಗಳನ್ನು ಮಹಿಳೆಯ ಗರ್ಭಕೋಶಕ್ಕೆ ಲಗತ್ತಿಸಲು ಸಹಾಯ ಮಾಡುವ ಒಂದು ತಂತ್ರಜ್ಞಾನ.
  ಅಂಡಾಣುಗಳನ್ನು ಜೋನಾ ಪೆಲ್ಲುಸಿಡ ಎಂಬ ಹೊರ ಕವಚ ಸುತ್ತುವರೆದಿರುತ್ತದೆ. ಫಲವಂತಿಕೆಯ ನಂತರ ಭ್ರೂಣದ ಜೀವಕೋಶಗಳನ್ನು ಒಟ್ಟಾಗಿ ಇಡುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. ಭ್ರೂಣ ಗರ್ಭದಲ್ಲಿ ವಿಲೀನವಾಗುವಲ್ಲಿ ಜೋನಾ ಸೀಳುವಿಕೆ ಪ್ರಮುಖ  ಪಾತ್ರ ವಹಿಸುತ್ತದೆ.
  ಅಧ್ಯಯನಗಳ ಪ್ರಕಾರ  ಪ್ರನಾಳೀಯ ಫಲೀಕರಣ ವಿಧಾನ 2. 37 ವರ್ಷ ಮೇಲ್ಪಟ್ಟ ವಯಸ್ಸಿನ ಮಹಿಳೆಯ ಅಂಡಾಣು ಹಾಗೂ 3. ಫಾಲಿಕ್ಯುಲಾರ್ ಸ್ಟಿಮ್ಯುಲೇಷನ್ ಹಾರ್ಮೋನಿನ ಮಟ್ಟ ಹೆಚ್ಚಿರುವ ಮಹಿಳೆಯರು ಗಟ್ಟಿಯಾದ ಜೋನಾ ಸಮಸ್ಯೆಯನ್ನು ಹೊಂದಿರುತ್ತಾರೆ. ಈ ಸನ್ನಿವೇಶಗಳಲ್ಲಿ ಜೋನಾ ಸೀಳುವಿಕೆ ಸಾಧ್ಯವಾಗದಿದ್ದಲ್ಲಿ ಮಹಿಳೆಯರು ಗರ್ಭಧರಿಸುವಲ್ಲಿ ವಿಫಲರಾಗುತ್ತಾರೆ.
  ಲೇಸರ್ ಚಿಕಿತ್ಸೆಯ ಸಮಯದಲ್ಲಿ ಭ್ರೂಣದ ಹೊರ ಕವಚ (ಜೋನಾ)ವನ್ನು ಲೇಸರ್ ಕಿರಣಗಳಿಂದ ವಹಿಸಲಾಗುತ್ತದೆ. ಲೇಸರ್ ನೆರವಿನ ಹ್ಯಾಚಿಂಗ್‌ನ ನಂತರ ಭ್ರೂಣಗಳನ್ನು ಮಹಿಳೆಯ ಗರ್ಭಕ್ಕೆ ವರ್ಗಾಯಿಸಿದಾಗ ಹೆಚ್ಚಿನ ಸಮಯದಲ್ಲಿ ಭ್ರೂಣ ಗರ್ಭಕೋಶದಲ್ಲಿ ವಿಲೀನಗೊಂಡು ಸಾಮಾನ್ಯ ಬೆಳವಣಿಗೆ ಸಾಧ್ಯವಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement