ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಣದುಬ್ಬರ ಮೌಲ್ಯಮಾಪನ ಕುರಿತ ವಿಶೇಷ ಉಪನ್ಯಾಸ

Vishwanath S
Updated On : 8 Mar 2014, 12:58 pm

ಮೈಸೂರು: ಮೈಸೂರು ವಿವಿ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದಿಂದ ಪ್ರೊ.ಜಿ.ಟಿ. ಹುಚ್ಚಪ್ಪ ದತ್ತಿ ಪ್ರಯುಕ್ತ ಭಾರತದಲ್ಲಿ ಹಣದುಬ್ಬರ ಮೌಲ್ಯಮಾಪನ ಮತ್ತು ನಿಭಾಯಿಸುವಿಕೆ ಹಾಗೂ ತುರ್ತು ಕ್ರಮಗಳು ಕುರಿತ  ಶುಕ್ರವಾರ ಉಪನ್ಯಾಸ ಏರ್ಪಡಿಸಲಾಗಿತ್ತು.
ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಜಿಕೆವಿಕೆಯ ನಿವೃತ್ತ ಪ್ರಾಧ್ಯಾಪಕ ಎಂ.ವಿ. ಶ್ರೀನಿವಾಸಗೌಡ ಮಾತನಾಡಿ, ಹಣದುಬ್ಬರ ಮೌಲ್ಯಮಾಪನ ವಿಧಾನವನ್ನು ಮೊದಲ ಬಾರಿಗೆ 1942ರಲ್ಲಿ ಪರಿಚಯಿಸಲಾಯಿತು. ಸಗಟು ದರ ಆಧಾರಿತ ಹಾಗೂ ಗ್ರಾಹಕರ ದರ ಆಧಾರಿತವಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ಎಂದು ಹೇಳಿದರು.
ಕಚ್ಚಾ ವಸ್ತುಗಳಿಗೆ ಬೇಡಿಕೆ ಹೆಚ್ಚಾದಾಗ, ಉತ್ಪಾದನಾ ವಸ್ತುಗಳ ರಫ್ತು ಕಡಿಮೆಯಾದಾಗ ಹಣದುಬ್ಬರ ಏರಿಕೆಯಾಗುತ್ತದೆ. ಸಾಮಾನ್ಯ ಜನರ ಮೇಲೆ ನೇರ ಪರಿಣಾಮ ಬೀರುತ್ತದೆ. ಇದೆಲ್ಲವನ್ನು ಅಳತೆ ಮಾಡಲು ಡಬ್ಯೂಪಿಐ ವಿಧಾನ ಬಳಸಲಾಗುತ್ತದೆ. ಹಣದುಬ್ಬರವು ಹೂಡಿಕೆ ಮೇಲೆ ಪರಿಣಾಮ ಬೀರುವುದಲ್ಲದೆ ನಾನಾ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅದಕ್ಕಾಗಿ ಸರಳ ಮಾರ್ಗಗಳನ್ನು ಅನುಸರಿಸುವುದನ್ನು ನಮ್ಮ ಜನರು ಕಂಡುಕೊಳ್ಳಬೇಕು ಎಂದರು.
ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಡಿ.ಎಸ್. ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement