ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿಶ್ವನಾಥ್‌ಗೆ ಒಕ್ಕಲಿಗರ ಬೆಂಬಲ

Vishwanath S
Updated On : 9 Mar 2014, 1:21 am

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಚಾಮರಾಜ, ಕೃಷ್ಣರಾಜ, ನರಸಿಂಹರಾಜ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಒಕ್ಕಲಿಗರ ಸಮಾವೇಶವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಕುವೆಂಪುನಗರದ ಚಿಕ್ಕಮಾನಿಕೇತನ ಕಲ್ಯಾಣ ಮಂಟಪದಲ್ಲಿ ನಡೆದ ಸಮಾವೇಶದಲ್ಲಿ ಸಂಸದ ಎಚ್.ವಿಶ್ವನಾಥ್ ಮಾತನಾಡಿ, ನನ್ನ 40 ವರ್ಷಗಳ ಸುಧೀರ್ಘ ರಾಜಕಾರಣದಲ್ಲಿ ನೇರ ನುಡಿಗಳಿಂದ ಮಾತನಾಡುವುದು ಬಿಟ್ಟರೆ, ಕಪಟ ರಾಜಕಾರಣ ಮಾಡುವುದು ನನಗೆ ಗೊತ್ತಿಲ್ಲ. ಕೆ.ಆರ್. ನಗರದಲ್ಲಿ ನಂಜಪ್ಪ ಮತ್ತು ನಾನು ಅನೇಕ ಬಾರಿ ಸ್ಪರ್ಧಿಸಿದ್ದರೂ ವಿರೋಧ ಕಟ್ಟಿಕೊಂಡಿಲ್ಲ. ರಾಜಕೀಯವಾಗಿ ಜೆಡಿಎಸ್ ಮುಖಂಡರನ್ನು ಟೀಕಿಸುವುದನ್ನು ಬಿಟ್ಟರೆ ಒಕ್ಕಲಿಗ ಸಮುದಾಯವನ್ನು ನಾನು ಯಾವತ್ತೂ ನಿಂದಿಸಿಲ್ಲ. ನನ್ನ ವಿರುದ್ಧ ಸುಮ್ಮನೆ ಅಪಪ್ರಚಾರ ಮಾಡಲಾಗುತ್ತಿದೆ ಎಂದರು. ಶಾಸಕ ವಾಸು ಮಾತನಾಡಿ, ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸಬೇಕು. ನಮ್ಮ ಅಭ್ಯರ್ಥಿ ವಿಶ್ವನಾಥ್ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಮಾಜಿ ಶಾಸಕ ಎಂ. ಸತ್ಯನಾರಾಯಣ, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು, ಮುಖಂಡರಾದ ಸಿ.ಎನ್. ಮಂಜೇಗೌಡ, ಸಿ. ಬಸವೇಗೌಡ, ಎಂ. ಲಕ್ಷ್ಮಣ್, ಎಂ.ಬಿ. ಸಿದ್ದೇಗೌಡ, ಪಾಲಿಕೆ ಸದಸ್ಯ ಪಿ. ಪ್ರಶಾಂತ್‌ಗೌಡ ಮತ್ತಿತರರು ಪಾಲ್ಗೊಂಡಿದ್ದರು.
ಫುಟ್‌ಬಾಲ್ ಪಂದ್ಯಾವಳಿ
ಮೈಸೂರು: ಅಥ್ಲೀಟ್ಸ್ ಫುಟ್‌ಬಾಲ್ ವತಿಯಿಂದ ದಿ. ಜೆ. ಬೆಟ್ಟಯ್ಯ ಅವರ ಸ್ಮರಣಾರ್ಥ ಪ್ರಥಮ ದರ್ಜೆ ಕಾಲೇಜುಗಳಿಗೆ ಮಾ. 20ರಿಂದ 23ರವರೆಗೆ ಜಿಲ್ಲಾಮಟ್ಟದ ಅಂತರ ಕಾಲೇಜು ಫುಟ್‌ಬಾಲ್ ಪಂದ್ಯಾವಳಿಯನ್ನು ಮೈಸೂರು ವಿವಿ ಫುಟ್‌ಬಾಲ್ ಮೈದಾನದಲ್ಲಿ ಏರ್ಪಡಿಸಿದೆ. ಆಸಕ್ತ ಕಾಲೇಜು ತಂಡಗಳು ಮಾ.15ರೊಳಗೆ ಕೆ. ಗುರುರಾಜ್, ಕಾರ್ಯದರ್ಶಿ, ಮೊ. 9880260510 ಮತ್ತು ಪಶುಪತಿ, ಜಂಟಿ ಕಾರ್ಯದರ್ಶಿ, ಮೊ. 9845436112 ಅವರನ್ನು ಸಂಪರ್ಕಿಸಿ 200 ಪ್ರವೇಶ ಶುಲ್ಕದೊಂದಿಗೆ ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಸಿದ್ಧ ಉಡುಪು ತರಬೇತಿ
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್‌ನ ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ, ಜಿಲ್ಲೆ ಗ್ರಾಮೀಣ ಹಾಗೂ ನಗರ ನಿರುದ್ಯೋಗ ಯುವಕ, ಯುವತಿಯರಿಗೆ ಜಿಪಂ ಮತ್ತು ಕೈಮಗ್ಗ ಹಾಗೂ ಜವಳಿ ಇಲಾಖೆಯ ಸಹಯೋಗದೊಂದಿಗೆ ಸುವರ್ಣ ವಸ್ತ್ರನೀತಿ ಯೋಜನೆಯಡಿ ಜೆಎಸ್‌ಎಸ್ ಮಹಾವಿದ್ಯಾಪೀಠವು ಜೆಎಸ್‌ಸ್ ಸಿದ್ಧ ಉಡುಪು ತರಬೇತಿ ಮತ್ತು ವಿನ್ಯಾಸ ಕೇಂದ್ರದ ವತಿಯಿಂದ ಹೊಲಿಗೆ ತರಬೇತಿ ನಡೆಸಲು ಸೂಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಮೊ. 9686677232, 9916320882 ಸಂಪರ್ಕಿಸಬಹುದು.
ಪ್ರಬಂಧ ಸ್ಪರ್ಧೆ
ನಗರದ ಹೆಬ್ಬಾಳದಲ್ಲಿರುವ ವಿವೇಕಾನಂದ ಇನ್‌ಸ್ಟಿಟ್ಯೂಟ್ ಫಾರ್ ಲೀಡರ್‌ಶಿಪ್ ಡೆವಲಪ್‌ಮೆಂಟ್ ಸಂಸ್ಥೆ ವತಿಯಿಂದ ಮಾಸ್ಟರ್ ಆಫ್ ಡೆವಲಪ್‌ಮೆಂಟ್ ಮ್ಯಾನೇಜ್‌ಮೆಂಟ್‌ನ 2014-15ನೇ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯಲು ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಮಾ.23ರ ಬೆಳಗ್ಗೆ 10.30 ರಿಂದ 12 ರವರೆಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ. ಪ್ರವೇಶ ಬಯಸುವ ಆಸಕ್ತ ವಿದ್ಯಾರ್ಥಿಗಳಿಗಾಗಿ ಸುಮಾರು 10 ಪ್ರವೇಶಾತಿಯನ್ನು ವಿದ್ಯಾರ್ಥಿ ವೇತನದ ಆಧಾರದ ಮೇಲೆ ಕಾಯ್ದಿರಿಸಿದೆ. ಈ ಕಾಯ್ದಿರಿಸಿದ ಪ್ರವೇಶಾತಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ. ಸ್ಪರ್ಧೆಯಲ್ಲಿ ವಿಜೇತರಾದ ಮೊದಲ 10 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಶೇ.75 ರಿಂದ 25ಕ್ಕೆ ಕಾಯ್ದಿರಿಸಿದ್ದು, ಉಳಿದ ವಿಜೇತರಿಗೆ ಸಮಾಧಾನಕರ ಬಹುಮಾನ ನೀಡಲಿದೆ. ಆಸಕ್ತ ಪದವೀಧರರು ಮಾ.20ರ ಸಂಜೆ 5.30 ರೊಳಗಾಗಿ ಹೆಸರನ್ನು ನೋಂದಾಯಿಸಬಹುದು. ಮೊ. 9900088697 ಸಂಪರ್ಕಿಸಬಹುದು.
ತರಬೇತಿ
ಎಚ್.ಡಿ. ಕೋಟೆ ತಾಲೂಕಿನ ಕಾಟವಾಳಿನ ಚಿಗುರು ವಿಜ್ಞಾನ ಸಂಸ್ಥೆ ವತಿಯಿಂದ 5ನೇ ತರಗತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗಾಗಿ ಏ.16 ರಿಂದ 21 ರವರೆಗೆ ಮೈಸೂರಿನಲ್ಲಿ ತರಬೇತಿ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 8971797901 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement