ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ

Vishwanath S
Updated On : 13 Mar 2014, 1:41 am

ಕ.ಪ್ರ.ವಾರ್ತೆ ,  ಮೈಸೂರು ,  ಮಾ.12
ರಾಜಕೀಯ ಪಕ್ಷಗಳು, ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಕಟ್ಟುನಿಟ್ಟಾಗಿ ಸೂಚಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಹಾಗೂ ಚುನಾವಣಾ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಾದರಿ ನೀತಿ ಸಂಹಿತೆ ರಾಜಕೀಯ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ, ಸರ್ಕಾರಿ ನೌಕರರು ಮತ್ತಿತರಿಗೆ ಅನ್ವಯವಾಗುತ್ತದೆ. ಸಂಬಂಧಿಸಿದ ಎಲ್ಲರೂ ಸ್ವಪ್ರೇರಣೆಯಿಂದ ನೀತಿ ಸಂಹಿತೆ ಅನುಸರಿಸಬೇಕು. ನೀತಿ ಸಂಹಿತೆ ಉಲ್ಲಂಘಿಸುವ ಯಾರೇ ಆದರೂ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಾಗುತ್ತದೆ. ಶಾಂತಿಯುತ ಹಾಗೂ ನ್ಯಾಯಯುತ ಚುನಾವಣೆ ನಡೆಸಲು ಎಲ್ಲರೂ ಸಹಕರಿಸಬೇಕು ತಿಳಿಸಿದರು.
ಚುನಾವಣಾ ಆಯೋಗದ ರಾಜ್ಯಮಟ್ಟದ ತರಬೇತಿ ಸಂಪನ್ಮೂಲ ವ್ಯಕ್ತಿ ಡಾ.ಸಿ.ಜಿ. ಬೆಟ್‌ಸೂರ್ ಮಠ ಮಾದರಿ ನೀತಿಯ ವಿವರ ನೀಡಿದರು.
ಹೀಗೆ ನಡೆಯಲಿ ಚುನಾವಣೆ: ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ವಿವಿಧ ವೈಮನಸ್ಯತ್ವವನ್ನು ಭಿನ್ನಾಭಿಪ್ರಾಯ ಕೆರಳಿಸುವ ಅಥವಾ ಪರಸ್ವರ ದ್ವೇಷ ಹುಟ್ಟಿಸುವ ಅಥವಾ ಉದ್ವೇಗಕ್ಕೆ ಕಾರಣವಾಗುವ ಯಾವುದೇ ಚಟುವಟಿಕೆಗಳಲ್ಲಿ ತೊಡಗಬಾರದು. ಟೀಕೆಗಳು ಪಕ್ಷಗಳಿಗೆ ಸೀಮಿತವಾಗಿರಬೇಕು. ಖಾಸಗಿ ಜೀವನದ ಅಂಶಗಳನ್ನು ಮಧ್ಯ ತರಬಾರದು. ಮತ ಗಳಿಕೆಗಾಗಿ ಜಾತಿ, ಮತ ಮತ್ತು ಕೋಮುಭಾವನೆಗಳ ಆಧಾರದ ಮೇಲೆ ಮನವಿ ಮಾಡಬಾರದು ಎಂದರು.
ಮತದಾರರಿಗೆ ಲಂಚ ನೀಡುವುದು, ಮತದಾರರನ್ನು ಬೆದರಿಸುವುದು, ಮತದಾನಕ್ಕೆ 48 ಗಂಟೆ ಬಾಕಿ ಇರುವಾಗಲೇ ಸಾರ್ವಜನಿಕ ಸಭೆಗಳನ್ನು ನಡೆಸುವುದು ಮತ್ತು ಮತಗಟ್ಟೆಗಳಿಗೆ ಮತದಾರರನ್ನು ವಾಹನದಲ್ಲಿ ಕರೆತರುವುದು. ಪ್ರತಿಯೊಬ್ಬ ವ್ಯಕ್ತಿಯ ಶಾಂತಿಯುತ ಹಾಗೂ ಅಬಾಧಿತ ಕುಟುಂಬ ಜೀವನ ನಡೆಸುವ ಹಕ್ಕನ್ನು ಗೌರವಿಸಬೇಕು. ಪರಸ್ಪರ ಪಕ್ಷಗಳ ಬಾವುಟ ಅಥವಾ ಬ್ಯಾನರ್‌ಗಳನ್ನು ತೆಗೆದುಹಾಕುವಂತಿಲ್ಲ.
ಪೊಲೀಸರು ಸಕಾಲದಲ್ಲಿ ಜನ ಮತ್ತು ವಾಹನಗಳ ಸಂಚಾರ ನಿಯಂತ್ರಿಸಲು ಮತ್ತು ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ ಅಗತ್ಯ ವ್ಯವಸ್ಥೆ ಮಾಡಬೇಕು. ಸಭೆ ನಡೆಸುವ ಪ್ರದೇಶದಲ್ಲಿ ಯಾವುದೇ ಪ್ರತಿಬಂಧಕಾಜ್ಞೆ ಅಥವಾ ನಿಷೇಧಾಜ್ಞೆ ಜಾರಿಯಲ್ಲಿದೆಯೇ ಅಥವಾ ಇಲ್ಲವೆ ಎಂಬ ಬಗ್ಗೆ ಪಕ್ಷ ಅಥವಾ ಅಭ್ಯರ್ಥಿಯು ಮುಂಚಿತವಾಗಿಯೇ ವಿಚಾರಿಸಿಕೊಳ್ಳಬೇಕು. ಧ್ವನಿ ವರ್ಧಕಗಳ ಬಳಕೆಗೆ ಪೂರ್ವಾನುಮತಿ ಪಡೆದುಕೊಳ್ಳುವುದು, ಒಂದು ಸಭೆ ನಡೆಯುತ್ತಿರುವಾಗ ಅದಕ್ಕೆ ತೊಂದರೆ ಮಾಡಬಾರದು. ಮೆರವಣಿಗೆ ಏರ್ಪಡಿಸುವ ಪಕ್ಷ ಅಥವಾ ಆಭ್ಯರ್ಥಿಯು ಮೆರವಣಿಗೆ ಪ್ರಾರಂಭವಾಗುವ ವೇಳೆ ಮತ್ತು ಸ್ಥಳ, ಅದು ಹಾದು ಹೋಗುವ ಮಾರ್ಗಗಳ ಸಂಪೂರ್ಣ ಮಾಹಿತಿ ನೀಡಿರಬೇಕು.
ಅಧಿಕಾರದಲ್ಲಿರುವ ಪಕ್ಷದವರಿಗೆ ಸೂಚನೆ
ಕೇಂದ್ರ ಅಥವಾ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷ ಅಧಿಕಾರ ದುರ್ಬಳಕೆ ಮಾಡಿಕೊಳ್ಳಬಾರದು. ಸಚಿವರು ತಮ್ಮ ಭೇಟಿಯನ್ನು ಚುನಾವಣೆ ಪ್ರಕ್ರಿಯೆಗೆ ಸೇರಿಸಬಾರದು. ಮೈದಾನ ಮುಂತಾದ ಕಡೆಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಆಕಾಶಯಾನಗಳನ್ನು ನಿಲ್ಲಿಸಲು ಹೆಲಿಪ್ಯಾಡ್‌ಗಳನ್ನು ಏಕಸ್ವಾಮ್ಯಕ್ಕೆ ಒಳಪಡಿಸಿಕೊಳ್ಳಬಾರದು. ವಿಶ್ರಾಂತಿ ಗೃಹ, ಡಾಕ್ ಬಂಗ್ಲೆ ಅಥವಾ ವಸತಿಗೃಹವನ್ನು ಚುನಾವಣಾ ಪ್ರಚಾರದ ಉದ್ದೇಶಗಳಿಗಾಗಿ ಬಳಸಿಕೊಳ್ಳಬಾರದು. ಸಾರ್ವಜನಿಕ ನಿಧಿಯಿಂದ ಸಮಾಚಾರ ಪತ್ರಿಕೆಗಳಲ್ಲಿ ಮತ್ತು ಇತರೆ ಮಾಧ್ಯಮಗಳ ಮೂಲಕ ಜಾಹಿರಾತು ನೀಡುವುದನ್ನು ಅಥವಾ ಸರ್ಕಾರಿ ಮಾಧ್ಯಮಗಳ ಮೂಲಕ ಜಾಹಿರಾತು ನೀಡುವುದನ್ನು ತಡೆಯಬೇಕು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ವಿವಿಧ ನೋಡಲ್ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಏನೇನು ಕಟ್ಟುನಿಟ್ಟಿನ ಕ್ರಮ?
ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ಪರಸ್ವರ ದ್ವೇಷ ಹುಟ್ಟಿಸುವ ಅಥವಾ ಉದ್ವೇಗಕ್ಕೆ ಕಾರಣವಾಗುವ ಯಾವುದೇ ಚಟುವಟಿಕೆಗಳಲ್ಲಿ ತೊಡಗಬಾರದು
ಖಾಸಗಿ ಜೀವನದ ಅಂಶಗಳನ್ನು ಮಧ್ಯ ತರಬಾರದು, ಮತ ಗಳಿಕೆಗಾಗಿ ಜಾತಿ, ಮತ ಮತ್ತು ಕೋಮುಭಾವನೆಗಳ ಆಧಾರದ ಮೇಲೆ ಮನವಿ ಮಾಡಬಾರದು
ಮತದಾರರಿಗೆ ಲಂಚ ನೀಡುವುದು, ಮತದಾರರನ್ನು ಬೆದರಿಸುವುದು,  ಮತದಾನಕ್ಕೆ 48 ಗಂಟೆ ಬಾಕಿ ಇರುವಾಗಲೇ ಸಾರ್ವಜನಿಕ ಸಭೆಗಳನ್ನು ನಡೆಸಬಾರದು
ಪ್ರತಿಯೊಬ್ಬ ವ್ಯಕ್ತಿಯ ಶಾಂತಿಯುತ ಹಾಗೂ ಅಬಾಧಿತ ಕುಟುಂಬ ಜೀವನ ನಡೆಸುವ ಹಕ್ಕನ್ನು ಗೌರವಿಸಬೇಕು
ಪೊಲೀಸರು ಸಕಾಲದಲ್ಲಿ ಜನ ಮತ್ತು ವಾಹನಗಳ ಸಂಚಾರ ನಿಯಂತ್ರಿಸಲು ಮತ್ತು ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ ಅಗತ್ಯ ವ್ಯವಸ್ಥೆ ಮಾಡಬೇಕು
ಮತದಾನದ ದಿನ
ಮತದಾರರು ಮುಕ್ತವಾಗಿ ಮತ ಚಲಾಯಿಸಲು ಸೂಕ್ತ ವಾತಾವರಣ ಕಲ್ಪಿಸುವುದು. ಮತಗಟ್ಟೆ ಅಧಿಕಾರಿಗಳ ಕರ್ತವ್ಯಕ್ಕೆ ತೊಂದರೆ ನೀಡಬಾರದು. ಪಕ್ಷ ಅಥವಾ ಅಭ್ಯರ್ಥಿಯ ಪರ ಅಧಿಕೃತ ಕಾರ್ಯಕರ್ತರು ಬ್ಯಾಡ್ಜ್ ಹೊಂದಿರುವುದು. ಮತದಾನದ ದಿನ ಮತ್ತು ಅದಕ್ಕೆ ಮುಂಚಿತ 48 ಗಂಟೆಗಳ ಅವಧಿಯಲ್ಲಿ ಮದ್ಯ ಹಂಚಬಾರದು. ಅಭ್ಯರ್ಥಿಗಳ ಪರ ಕಾರ್ಯಕರ್ತರಲ್ಲಿ ಘರ್ಷಣೆ ಮತ್ತು ಉದ್ವೇಗಗಳಿಗೆ ಅವಕಾಶ ನೀಡಬಾರದು. ಮತದಾನ ನಡೆಯುವ ದಿನ ವಾಹನಗಳನ್ನು ಬಳಸುವುದರ ಮೇಲೆ, ಅಭ್ಯರ್ಥಿಗಳು ಅಥವಾ ಅವರ ಏಜೆಂಟರು ಬಳಸುವ ವಾಹನಗಳಿಗೆ ಅನುಮತಿ ಪಡೆದುಕೊಳ್ಳುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement