ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಲಾಳಂದೇವನಹಳ್ಳಿ ಗ್ರಾಪಂಗೆ ಆಯ್ಕೆ

Vishwanath S
Updated On : 15 Mar 2014, 1:21 am

ಕೆ.ಆರ್. ನಗರ: ತಾಲೂಕಿನ ಲಾಳಂದೇವನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಜಯಮ್ಮ ಪುಟ್ಟಸ್ವಾಮಿನಾಯಕ ಅವಿರೋಧ ಆಯ್ಕೆಯಾದರು.
ಪಂಚಾಯ್ತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತರಾಗಿ ಜಯಮ್ಮ ಪುಟ್ಟಸ್ವಾಮಿನಾಯಕ ಅವರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದಿದ್ದರಿಂದ ಚುನಾವಣಾಧಿಕಾರಿ ಎಸ್.ಟಿ. ಜವರೇಗೌಡ ಆಯ್ಕೆ ಪ್ರಕಟಿಸಿದರು.
ಮಾಜಿ ಅಧ್ಯಕ್ಷೆ ಶ್ರುತಿಪುಟ್ಟರಾಜು, ಮಹದೇವನಾಯಕ, ಉಪಾಧ್ಯಕ್ಷರಾದ ಮಣಿಯಮ್ಮ, ಸದಸ್ಯರಾದ  ಚಂದ್ರಶೇಖರ, ಡಿ. ಮಹದೇವ್, ಶಂಕರೇಗೌಡ, ಬಿ. ಮಹದೇವ್, ಎಂ.ಎಸ್. ಮಹೇಶ್, ಎನ್.ಎಸ್. ದಿವಾಕರ, ಜಿ. ಸ್ವಾಮಿನಾಥ್, ಆರ್. ಇನಾಸಪ್ಪ, ಲೋಕೇಶಾಚಾರಿ, ನುಸ್ರತ್‌ಉನ್ನೀಸ್, ರಾಜಮ್ಮ, ಈರಮ್ಮ, ಶಿವಮ್ಮ, ವಿಮಲಾಮಹೇಶ್, ಸುಮಿತ್ರ, ಪಿಡಿಒ ಕೆ. ನಾಗರಾಜು, ಕಾರ್ಯದರ್ಶಿ ಎ.ಎಂ.ರಮೇಶ್ ಭಾಗವಹಿಸಿದ್ದರು. ಹೊಸಹಳ್ಳಿ ಪುಟ್ಟರಾಜು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಇ. ಯೋಗಾನಂದ, ರವಿಕುಮಾರ್, ಗ್ರಾಪಂ ಮಾಜಿ ಸದಸ್ಯ ಕುಮಾರನಾಯಕ ಅಧ್ಯಕ್ಷರನ್ನು ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement