ಚೊಕ್ಕಚಿನ್ನ ಸಿದ್ದಪ್ಪಾಜಿ ಸಿಡಿ ಬಿಡುಗಡೆ
ಮೈಸೂರು: ಮಹದೇಶ್ವರ ಮಿತ್ರ ಮಂಡಳಿ ಹೊರ ತಂದಿರುವ ಚೊಕ್ಕಚಿನ್ನ ಸಿದ್ದಪ್ಪಾಜಿ ಎಂಬ ಚಿತ್ರಿತ ಗೀತೆಗಳ ದೃಶ್ಯಾಂಜಲಿ ಆಡಿಯೋ ಮತ್ತು ವೀಡಿಯೊ ಸಿಡಿಯನ್ನು ಶಾಸಕ ಎಂ.ಕೆ. ಸೋಮಶೇಖರ್ ಅವರು ನಾದಬ್ರಹ್ಮ ಸಂಗೀತ ಸಭಾದಲ್ಲಿ ಸೋಮವಾರ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಸೋಮಶೇಖರ್, ಮಹದೇಶ್ವರ, ಸಿದ್ದಪ್ಪಾಜಿ ಅವರು ಸಮಾಜದ ಅಂಕುಡೊಂಕುಗಳನ್ನು ಎತ್ತಿ ತೋರಿಸಿ ಸರಿಪಡಿಸಿದ್ದಾರೆ. ವೈಜ್ಞಾನಿಕ ಯುಗದಲ್ಲೂ ಮೂಢನಂಬಿಕೆ ಹೆಚ್ಚಾಗಿದೆ. ಸಮಾಜದಲ್ಲಿ ಜಾತಿ ವ್ಯವಸ್ಥೆ ಗಟ್ಟಿ ಆಗುತ್ತಿದ್ದು, ಇದನ್ನು ತೊಡೆದು ಹಾಕಬೇಕಿದೆ. ಎಲ್ಲರಲ್ಲೂ ಭಗವಂತ ಇದ್ದಾನೆ. ಪರಸ್ಪರ ಗೌರವಿಸಬೇಕು, ಪ್ರೀತಿಸಬೇಕು ಎಂದು ಸಲಹೆ ನೀಡಿದರು. ಮೇಲುಕೋಟೆಯ ಇಳೈ ಆಳ್ವಾರ್ ಸ್ವಾಮೀಜಿ, ಗುಂಡೂರಾವ್‌ನಗರದ ಬಾಲ ಶನೇಶ್ವರ ದೇವಸ್ಥಾನದ ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡರಾದ ಮೀನಾ ತೂಗುದೀಪ ಶ್ರೀನಿವಾಸ್, ಬುಲೆಟ್ ಮಹದೇವು, ಅಶ್ವಿನಿ ನರ್ಸಿಂಗ್ ಹೋಂನ ಡಾ. ಪುಟ್ಟಬಸಪ್ಪ, ಸಮಾಜ ಸೇವಕ ರಂಗನಾಥರಾಜೇ ಅರಸ್, ಹಿರಿಯ ಕಲಾವಿದ ಮೈಮಾ ನಾಗರಾಜ್, ಚೊಕ್ಕಚಿನ್ನ ಸಿದ್ದಪ್ಪಾಜಿ ನಿರ್ದೇಶಕ ಮಹದೇವ ಗುಡ್ಡಪ್ಪ ಇದ್ದರು.