ಕಾಲೇಜು ವಿದ್ಯಾರ್ಥಿಗಳಿಗಾಗಿ ಶೈಲಾಕ್ ವಿಶೇಷ ಪ್ರದರ್ಶನ
ಮೈಸೂರು: ಮೈಸೂರು ವಿವಿಯು ವಿಲಿಯಂ ಷೇಕ್ಸ್ಪಿಯರ್ ರಚನೆಯ ಶೈಲಾಕ್ ದಿ ಮರ್ಚೆಂಟ್ ಆಫ್ ವೆನಿಸ್ ಅನ್ನು ಬಿ.ಎ, ಬಿ.ಎಸ್ಸಿ ಪದವಿ 4ನೇ ಚಾತುರ್ಮಾಸ್ಯದ ಪಠ್ಯಕ್ರಮವಾಗಿದೆ. ಆದ್ದರಿಂದ ರಂಗಾಯಣವು ಈ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾ. 19ರಿಂದ 22ರವರೆಗೆ ಪ್ರತಿದಿನ ಮಧ್ಯಾಹ್ನ 3.30ಕ್ಕೆ ವಿಶೇಷ ಪ್ರದರ್ಶನ ಏರ್ಪಡಿಸಿದ್ದು, ಟಿಕೆಟ್ ದರವನ್ನು 15ಕ್ಕಿಳಿಸಿ ರಿಯಾಯಿತಿ ಕಲ್ಪಿಸಿದೆ.
ನಾಟಕದ ಬಗ್ಗೆ: ವಿಲಿಯಂ ಷೇಕ್ಸ್ಪಿಯರ್ ತಾನು ಬದುಕಿದ್ದಾಗ ಕಂಡ ವರ್ಣದ್ವೇಷ, ಧಾರ್ಮಿಕ ತಲ್ಲಣ, ಪರಿಶುದ್ಧ ಪ್ರೀತಿ, ಹಣದ ಹಿಂದೆ ಓಡುವ ಮಾನವನ ದುರಾಸೆಯ ಮನಸ್ಸನ್ನು ಕೇಂದ್ರೀಕರಿಸಿ ಬರೆದಿರುವ ನಾಟಕ ಶೈಲಾಕ್. ಇಂದಿನ ದಿನಗಳಲ್ಲೂ ಹೆಚ್ಚು ಕಡಿಮೆ ಇಂತದ್ದೇ ವಾತಾವರಣ ನೆಲೆಸಿರುವುದರಿಂದ ನಾಟಕ ಪ್ರಸ್ತುತತೆಗೆ ಹತ್ತಿರವಿದೆ. ರಂಗದ ಮೇಲೆ ಬರುವ 15 ಪಾತ್ರಗಳೂ ಸಹ ಸಂದೇಶ ಹೊತ್ತು ತರುವುದು, ಪ್ರೇಕ್ಷಕರ ಚಿಂತನಾಲಹರಿಗೆ ಒಂದಷ್ಟು ಸಾಮಾಗ್ರಿ ಒದಗಿಸುವುದು. ಕೊನೆಗೆ ನಿರ್ಧಾರವನ್ನು ಅವರ ತೆಕ್ಕೆಗೆ ಬಿಟ್ಟು ಹೋಗುತ್ತಾರೆ. ನಾಟಕ ಮುಗಿಸಿ ಹೊರ ಬಂದ ಪ್ರೇಕ್ಷಕನ ಮನಸ್ಸಿನಲ್ಲಿ ಮಾನವೀಯತೆ, ಬರ್ಬರತೆ, ಕರುಣೆ- ದ್ವೇಷ ಹೀಗೆ ಹಲವು ಅಂಶಗಳು ಕಾಡುವುದು ಸತ್ಯ.