ಟೆಂಪೋ ಡಿಕ್ಕಿ: ಪೇದೆಗೆ ತೀವ್ರ ಪೆಟ್ಟು
ಗುಂಡ್ಲುಪೇಟೆ: ಮೂಲೆಹೊಳೆ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರತ ಮುಖ್ಯಪೇದೆಗೆ ಟೆಂಪೊ ಡಿಕ್ಕಿ ಹೊಡೆದು ಮಾರಣಾಂತಿಕ ಪೆಟ್ಟು ಬಿದ್ದಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಮುಖ್ಯಪೇದೆ ವಿಶ್ವ ಚೆಕ್ಪೋಸ್ಟ್ ಬಳಿ ನಿಂತಿದ್ದಾಗ ಮೈಸೂರು ಕಡೆಯಿಂದ ಬಂದ ಗೂಡ್ಸ್ ಟೆಂಪೋ ಬ್ರೇಕ್ ಫೇಲಾಗಿ ದಿಢೀರನೆ ನುಗ್ಗಿ ಡಿಕ್ಕಿ ಹೊಡೆದು ಎದುರು ಬರುತ್ತಿದ್ದ ಮತ್ತೆರಡು ಕಾರುಗಳಿಗೂ ಡಿಕ್ಕಿ ಹೊಡೆದಿದೆ.
ಮುಖ್ಯಪೇದೆ ವಿಶ್ವ ಅವರ ಎದೆಗೆ ಟೆಂಪೋ ಡಿಕ್ಕಿ ಹೊಡೆದ ರಭಸಕ್ಕೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ. ಉಸಿರಾಟ ಕೆಲ ಕಾಲ ನಿಂತಿತ್ತು ಎಂದು ಪ್ರತ್ಯೇಕ್ಷದರ್ಶಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಗಾಯಾಳು ವಿಶ್ವ ಅವನ್ನು ಕ್ಯಾಲಿಕೆಟ್ ಖಾಸಗಿ ಆಸ್ಪತ್ರೆಗೆ ಭಾನುವಾರ ರಾತ್ರಿಯೇ ದಾಖಲು ಮಾಡಲಾಗಿದೆ. ಆಸ್ಪತ್ರೆಯಲ್ಲಿ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಗುಂಡ್ಲುಪೇಟೆ ಎಸ್ಐ ಎಂ.ನಾಯಕ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಪೇದೆ ಬಸವಣ್ಣ, ರವಿ ಹಾಗು ವಿಶ್ವರ ಪತ್ನಿ ಆಸ್ಪತ್ರೆಯಲ್ಲೆ ಇದ್ದಾರೆ.