ಬಿಜೆಪಿ, ಜೆಡಿಎಸ್ ಮುಖಂಡರು ಕಾಂಗ್ರೆಸ್ಗೆ
ಕೊಳ್ಳೇಗಾಲ: ಪಟ್ಟಣದಲ್ಲಿ ಭಾನುವಾರ ನಡೆದ ಕೊಳ್ಳೇಗಾಲ ಮತ್ತು ಹನೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಜಿಲ್ಲೆಯ ಹಲವು ಬಿಜೆಪಿ, ಜೆಡಿಎಸ್ ಮುಖಂಡರು ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಬಿಜೆಪಿ ಲೋಕಸಭಾ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ನಿಕಟವರ್ತಿಗಳಾಗಿದ್ದ ತಾಪಂ ಮಾಜಿ ಸದಸ್ಯ ಕೆ.ಎಂ. ರಾಜೇಂದ್ರಸ್ವಾಮಿ, ಮುಖಂಡ ವಸುಪಾಲ್, ಕುದೇರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ, ಕುದೇರು ಗ್ರಾಮ ಪಂಚಾಯಿತಿ ಮಾಜಿ ಪ್ರಧಾನ ರೇವಣ್ಣ, ರುದ್ರಮೂರ್ತಿ, ಮಾಜಿ ಅಧ್ಯಕ್ಷ ಮಹೇಶ್ ಮತ್ತವರ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು.
ಚಾಮರಾಜನಗರ ನಗರಸಭೆ 9 ನೇ ವಾರ್ಡ್ನ ಜೆಡಿಎಸ್ ಸದಸ್ಯೆ ರೇಣುಕಾ, ಟಿ.ಸಿ.ಹುಂಡಿ ನಟರಾಜು, ಯಳಂದೂರು ಪಪಂ ಸದಸ್ಯ ರಂಗನಾಥ್, ಹರಳೆ ಗ್ರಾಪಂ ಅಧ್ಯಕ್ಷ ಸಿದ್ದರಾಜು, ಜೆಡಿಎಸ್ ಮುಖಂಡ ಎಲ್ಲೇಮಾಳದ ಮಕ್ಬೂಲ್, ಮಾರ್ಟಳ್ಳಿ ಜೆಡಿಎಸ್ ಗ್ರಾಪಂ ಅಧ್ಯಕ್ಷ ಫ್ರಾನ್ಸಿಸ್, ಹೊನ್ನೂರು ಜೆಡಿಎಸ್ ಮುಖಂಡ ಸಿದ್ದರಾಜು ಮತ್ತು ಬೆಂಬಲಿರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಕೊಳ್ಳೇಗಾಲ ನಗರಸಭಾ ಪಕ್ಷೇತರ ಸದಸ್ಯ ರಾಘವೇಂದ್ರ ಕಾಂಗ್ರೆಸ್ ಸೇರಿದರು.
ಪಕ್ಷಕ್ಕೆ ಸೇರ್ಪಡೆಗೊಂಡವರನ್ನು ಹಾರ ಹಾಗೂ ಕಾಂಗ್ರೆಸ್ ಶಲ್ಯ ಹಾಕಿ ಸ್ವಾಗತಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದು, ಲೋಕಸಭಾ ಅಭ್ಯರ್ಥಿ ಧ್ರುವನಾರಾಯಣ ಅವರನ್ನು ಗೆಲ್ಲಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು