ಮಹಾರಾಷ್ಟ್ರ ಯುವಕ ವಸತಿ ಗೃಹದಲ್ಲಿ ಸಾವು
ಗುಂಡ್ಲುಪೇಟೆ: ಮಹಾರಾಷ್ಟ್ರ ಮೂಲದ ಯುವಕ ಪಟ್ಟಣದ ಖುಷಿ ರೆಸಾರ್ಟ್ ವಸತಿ ಗೃಹದಲ್ಲಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 212 ರ ಬಳಿಯಿರುವ ಖುಷಿ ರೆಸಾರ್ಟ್ನಲ್ಲಿ ಭಾನುವಾರ ಸಂಜೆ 6.30 ರಲ್ಲಿ ಮಹಾರಾಷ್ಟ್ರದ ಪ್ರಸನ್ನ ಆರ್ಮುಗಂ (30) ರೂಂ ಪಡೆದಿದ್ದಾನೆ. ಈತ ಸೋಮವಾರ ಬೆಳಗ್ಗೆ 9 ಗಂಟೆಯಾದರೂ ರೂಂ ಬಾಗಿಲು ತೆರೆದಿಲ್ಲ. ಅನುಮಾನ ಗೊಂಡ ವ್ಯವಸ್ಥಾಪಕ ಸತ್ಯನ್ ಪೊಲೀಸರಿಗೆ ದೂರು ನೀಡಿದರು. ಕ್ರೈಂ ಸಬ್ ಇನ್ಸ್ಪೆಕ್ಟರ್ ಎಚ್.ಎನ್.ಬಾಲಕೃಷ್ಣ ಬಾಗಿಲು ತೆಗೆಸಿ ನೋಡಿದಾಗ ಹಾಸಿಗೆಯಲ್ಲೇ ಸಾವನ್ನಪ್ಪಿರುವುದು ಬೆಳಕಿಗೆ ಬಂತು.
ಪ್ರಸನ್ನ ಆರ್ಮುಗಂ ಅವರ ಐಡೆಂಟಿಟಿ ಕಾರ್ಡ್ನಲ್ಲಿ ಪ್ರಿಯದರ್ಶಿನಿ ಎಂದು ಇದೆ. ಸಾವನ್ನಪ್ಪಿರುವ ಯುವಕನ ಬಳಿ ಒಂದು ಸ್ಯಾಂಸಂಗ್ ಮೊಬೈಲಿದ್ದು, ಆದರಲ್ಲಿ ಸಿಮ್ ಕಾರ್ಡ್ ಇಲ್ಲ ಎಂದು ಕ್ರೈಂ ಸಬ್ಇನ್ಸ್ಪೆಕ್ಟರ್ ಎಚ್.ಎನ್.ಬಾಲಕೃಷ್ಣ ಮಾಹಿತಿ ನೀಡಿದರು.
ಪ್ರಸನ್ನ ಆರ್ಮಗಂ ಮಲಗಿದ್ದ ಹಾಸಿಗೆಯಲ್ಲಿ ಮಲಗಿದ್ದ ರೀತಿಯಲ್ಲಿಯೇ ಸಾವನ್ನಪ್ಪಿದ್ದಾನೆ. ಹಾಸಿಗೆಯಲ್ಲಿ ಅಸ್ತಮ ಕಾಯಿಲೆಯ ಮಾತ್ರೆಗಳು ದೊರೆತಿವೆ. ಮೇಲ್ನೋಟಕ್ಕೆ ಅಸ್ತಮ ರೋಗವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಚಹರೆ: ದಷ್ಟ ಪುಷ್ಟವಾದ ಮೈಕಟ್ಟು ಹೊಂದಿರುವ ಪ್ರಸನ್ನ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಹಸಿರು ಬಣ್ಣದ ಟೀ ಶರ್ಟ್ ಧರಿಸಿದ್ದು, ಕಪ್ಪು ಬಣ್ಣದ ಲಗೇಜ್ ಬ್ಯಾಗ್ ಇದೆ. ಈತನ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತರೆ ಸಮೀಪದ ಅಥವಾ ಗುಂಡ್ಲುಪೇಟೆ ಠಾಣೆ ಹಾಗೂ ಚಾಮರಾಜನಗರ ಪೊಲೀಸ್ ಕಚೇರಿ ಸಂಪರ್ಕಿಸಬಹುದು.