ವಾಲ್ಮೀಕಿ ನಿಂದನೆ; ನಾಯಕ ಸಂಘದಿಂದ ಪ್ರತಿಭಟನೆ
ಮೈಸೂರು: ಮಹರ್ಷಿ ವಾಲ್ಮೀಕಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಾಹಿತಿ ನಾರಾಯಣಚಾರಿ ವಿರುದ್ಧ ಪಟ್ಟಣದಲ್ಲಿ ಸೋಮವಾರ ನಾಯಕ ಸಂಘದಿಂದ ಪ್ರತಿಭಟಿಸಿ, ತಹಸೀಲ್ದಾರ್ ಶಿವಸ್ವಾಮಿಗೆ ಮನವಿ ಸಲ್ಲಿಸಿದರು. ಹಿಂದೂ ಪುರಾಣ ಚರಿತ್ರೆಯನ್ನು ತಿರುಚುವ ಹುನ್ನಾರವನ್ನು ನಡೆಸುತ್ತಿರುವ ನಾರಾಯಣಚಾರಿ ಬಿಡುಗಡೆಗೊಳಿಸಿರುವ ಕೃತಿಯನ್ನು ಕೂಡಲೇ ಮುಟ್ಟುಗೋಲು ಹಾಕಿಕೊಂಡು, ಅವರನ್ನು ಬಂಧಿಸಬೇಕು ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ಶಂಭುಲಿಂಗನಾಯಕ, ಬಿ.ಎಂ. ಶಿವಣ್ಣ, ಚಾಕಹಳ್ಳಿ ಕೃಷ್ಣ, ಪುರದಕಟ್ಟೆ ಬಸವರಾಜು, ಬಸಪ್ಪ, ಕೃಷ್ಣನಾಯಕ, ಸಿದ್ದರಾಜು, ದಾಸಪ್ಪ, ಚೆಲುವಕೃಷ್ಣನಾಯಕ, ಸೋಮನಾಯಕ, ನಾಗನಾಯಕ, ನಿಂಗನಾಯಕ, ರವಿಕುಮಾರ್, ವೇದಿಕೆಯ ಪದಾಧಿಕಾರಿಗಳು, ಜನಾಂಗದ ಮುಖಂಡರು ಭಾಗವಹಿಸಿದ್ದರು.