ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸ್ವರ್ಗವೆಂಬುದು ತಾಯಂದಿರ ಪಾದದಡಿಯಲ್ಲಿದೆ: ಖಾದರ್

Mainashree
Updated On : 17 Mar 2014, 10:19 am

ಮೈಸೂರು: ಸ್ವರ್ಗ ಎನ್ನುವುದು ತಾಯಂದಿರ ಪಾದದಡಿಯಲ್ಲಿದ್ದು, ತಾಯಿಯೇ ಪರಮ ದೈವ ಎಂದು ಕೇರಳದ ಕಣ್ಣೂರು ವಿವಿ ಕುಲಪತಿ ಡಾ.ಎಂ.ಕೆ. ಅಬ್ದುಲ್ ಖಾದರ್ ಹೇಳಿದರು.
ಮೈಸೂರು ವಿವಿ- ಯುಜಿಸಿ ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಸಹಾಯಕ ಪ್ರಾಧ್ಯಾಪಕರಿಗೆ 103ನೇ ಅಭಿವಿನ್ಯಾಸ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿ, ತಾಯಿ ಮಗುವಿಗೆ ಪ್ರಥಮ ಗುರುವಾಗಿ, ಸದಾ ಮಗುವಿನ ರಕ್ಷಣೆಗಾಗಿ ಮುಡಿಪಾಗಿರುತ್ತಾಳೆ. ಭಾರತೀಯ ಸಂಪ್ರದಾಯದಲ್ಲಿ ತಾಯಿಗೆ ಅದಮ್ಯ ಸ್ಥಾನ ನೀಡಲಾಗಿದ್ದು, ಅದನ್ನು ಪದಗಳಿಂದ ಬಣ್ಣಿಸಲು ಸಾಧ್ಯವಿಲ್ಲ ಎಂದರು.
ಮಾನವೀಯತೆಯ ಪ್ರತೀಕದಂತೆ ಕಾರ್ಯನಿರ್ವಹಿಸಿದ ಸ್ವಾಮಿ ವಿವೇಕಾನಂದ, ಮದರ್ ತೆರೆಸಾ ಅವರ ಆದರ್ಶಗಳು ಅನುಕರಣೀಯ. ಅಂತವರ ಕರುಣೆಯಿಂದ ಭಾರತದ ಸ್ವಾಸ್ಥ್ಯ ಸಮಾಜ ಇನ್ನು ಉಳಿದುಕೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ರಂಗಪ್ಪ ಮಾತನಾಡಿ, ಮುಂದಿನ ವರ್ಷದಿಂದ ವಿಜ್ಞಾನ ಮತ್ತು ಕಲಾ ವಿಭಾಗವನ್ನು ಸಮ್ಮಿಶ್ರಗೊಳಿಸಿ ಅಭಿವಿನ್ಯಾಸ ಕಾರ್ಯಕ್ರಮ ಆಯೋಜಿಸಲಾಗುವುದು. ವಿದೇಶಿ ವಿವಿಗಳ ಸಹಯೋಗದೊಂದಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಸಿಬ್ಬಂದಿಗೆ ಮಾರ್ಗದರ್ಶನ ನೀಡಲಾಗುವುದು ಎಂದರು.
ಯುಜಿಸಿ- ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯದ ನಿರ್ದೇಶಕ ಪ್ರೊ. ಲಿಂಗರಾಜ ಗಾಂಧಿ ಅತಿಥಿಯಾಗಿ ಭಾಗವಹಿಸಿದ್ದರು. ಸಂಯೋಜಕ ಡಾ.ಎಲ್. ನಂಜುಂಡಸ್ವಾಮಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement