ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂತರಸಂತೆ ವಲಯ ಅರಣ್ಯದಲ್ಲಿ ಬೆಂಕಿ

Mainashree
Updated On : 18 Mar 2014, 10:23 am

ಅಂತರಸಂತೆ: ಎಚ್.ಡಿ. ಕೋಟೆ ತಾಲೂಕು ಅಂತರಸಂತೆ ಗ್ರಾಮಕ್ಕೆ ಸಮೀಪವಿರುವ ರಾಜೀವ್ಗಾಂಧಿ ರಾಷ್ಟ್ರೀಯ ಉದ್ಯಾನದಲ್ಲಿ ನಾಗರಹೊಳೆ ರಕ್ಷಿತ ಅರಣ್ಯದಲ್ಲಿ ಮಂಗಳವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಮಳಲಿ, ಎನ್. ಬೆಳತ್ತೂರು ಕ್ರಾಸ್ನಿಂದ ಹೆಬ್ಬಾಳದ ಹತ್ತಿರ ಕ್ಯಾಂಪ್ವರೆಗೂ ಸುಮಾರು ಅರಣ್ಯ ನಾಶವಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಆಗಮಿಸಿದರೂ ಬೆಂಕಿಯ ಕೆನ್ನಾಲಿಗೆಯನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ. ಅರಣ್ಯಾಧಿಕಾರಿಗಳು ಬೆಂಕಿ ನಂದಿಸಲು ಪ್ರಯತ್ನ ಪಡುತ್ತಿದ್ದು, ಭಾರಿ ಜನರು ಇರುವುದರಿಂದ ಸಾಧ್ಯವಾಗದೇ ಏನಾಗುತ್ತದೆ ಎಂಬುದು ಗೊತ್ತಾಗದೇ ಪರದಾಡುತ್ತಿದ್ದಾರೆ. ಸ್ಥಳೀಯ ಗ್ರಾಮಸ್ಥರು, ಮಹಿಳೆಯರು ಕೂಡ ಬೆಂಕಿ ನಂದಿಸಲು ಮುಂದಾಗುತ್ತಿದ್ದು, ಬೆಂಕಿ ಹೆಚ್ಚುತ್ತಲೇ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement