ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪೌರಕಾರ್ಮಿಕರ ಮಕ್ಕಳಿಗೆ ತಟ್ಟಿದ ವಂತಿಗೆ ಹಾವಳಿ

Mainashree
Updated On : 18 Mar 2014, 11:48 am

ಮೈಸೂರು: ತಲೆತಲಾಂತರದಿಂದ ಸ್ವಚ್ಛತಾ ಕಾರ್ಯ ಮಾಡಿಕೊಂಡು ಬಂದಿರುವ ಪೌರಕಾರ್ಮಿಕರ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಶೋಷಣೆ ಮಾಡುತ್ತಿದ್ದು, ವಂತಿಗೆ ಹಾವಳಿಯಿಂದ ನಮಗೆ ತೊಂದರೆ ಮಾಡುತ್ತಿವೆ ಎಂದು ಮೈಸೂರು ಮಹಾನಗರ ಪಾಲಿಕೆ ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಹರೀಶ್‌ರಾಜ್ ಅಳಲು ತೋಡಿಕೊಂಡರು. ಕಾನೂನಿನ ಪ್ರಕಾರ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿರುವ ಪೌರಕಾರ್ಮಿಕರಿಗೆ ದಿನಕ್ಕೆ 240 ನಂತೆ ತಿಂಗಳಿಗೆ 7200 ಸಂಬಳವನ್ನು ಚೆಕ್ ಮೂಲಕ ತಿಂಗಳ 10ನೇ ತಾರಿಖಿನೊಳಗೆ ಪಾವತಿಸಬೇಕು. ಆದರೆ, ಹಲವು ಶಿಕ್ಷಣ ಸಂಸ್ಥೆಗಳಿಗೆ ಪೌರಕಾರ್ಮಿಕರಿಗೆ 800 ನಿಂದ 1000 ವರೆಗೆ ಸಂಬಳ ನೀಡುತ್ತಿವೆ. ಇದನ್ನು ವಿರೋಧಿಸಿ ಮಾ.25 ರಂದು ಸದ್ವಿದ್ಯಾ ಶಾಲೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಎನ್. ಜಯಸಿಂಹ ಅವರಿಂದ ಚಾಲನೆ ನೀಡಿ ಗಡುವು ನೀಡಲಾಗುವುದು. ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಸ್ವಚ್ಛತಾ ಕಾರ್ಯವನ್ನು ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement