ಮೂರು ದಿನ ವಿದ್ಯುತ್ ವ್ಯತ್ಯಯ
ಹುಣಸೂರು: ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ. ಕೋಟೆ ತಾಲೂಕಿನ ವಿವಿಧ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಮಾ.19, 21, 23ರ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿವಿಧೆಡೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಸೆಸ್ಕ್ ತಿಳಿಸಿದೆ. ಮಾ.19 ರಂದು ಹುಣಸೂರು, ಹೊಸೂರು ಗೇಟ್‌ನ 66/11 ಕೆ.ವಿ ವ್ಯಾಪ್ತಿಯ ಹುಣಸೂರು ಪಟ್ಟಣ, ಬನ್ನಿಕುಪ್ಪೆ, ಮರದೂರು, ಗಾವಡಗೆರೆ, ಹಿರಿಕ್ಯಾತನಹಳ್ಳಿ, ಕೊತ್ತೆಗಾಲ, ಬೀಜಿಗನಹಳ್ಳಿ, ಮುತ್ತುರಾಯನಹೊಸಳ್ಳಿ, ಕಟ್ಟೆಮಳಲವಾಡಿ ಎಕ್ಸ್‌ಪ್ರೆಸ್ ಫೀಡರ್, ಚಿಲ್ಕುಂದ, ತಟ್ಟೆಕೆರೆ, ನೆಲ್ಲೂರುಪಾಲ, ಗುರುಪುರ, ಉದ್ದೂರು, ಗೋವಿಂದನಹಳ್ಳಿ, ರತ್ನಪುರಿ, ಚೌಡಿಕಟ್ಟೆ, ಕೂಡ್ಲೂರು, ಸುತ್ತಮುತ್ತಲ ಪ್ರದೇಶಗಳು ಹಾಗೂ ಪಿರಿಯಾಪಟ್ಟಣ ಪಂಚವಳ್ಳಿ, ಮಾಲಂಗಿ, ಚೌಕಿ, ಕಂಪ್ಲಾಪುರ, ನಂದಿನಾಥಪುರ, ಮುತ್ತೂರು ಹಾಗೂ ಬಸ್ಲಾಪುರ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಆಗುವುದಿಲ್ಲ. ಮಾ.21 ರಂದು ಹನಗೋಡು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಹನಗೋಡು, ನೇರಳಕುಪ್ಪೆ, ಕರ್ಣಕುಪ್ಪೆ, ದೊಡ್ಡ ಹೆಜ್ಜೂರು ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳು. ಮಾ.23 ರಂದು ಎಚ್.ಡಿ. ಕೋಟೆ ತಾಲೂಕಿನ ಹಂಪಾಪುರ, ಸಂತೆ ಸರಗೂರು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಎಚ್.ಡಿ. ಕೋಟೆ ಪಟ್ಟಣ, ನಾಗನಹಳ್ಳಿ, ಹೈರಿಗೆ, ಸವ್ವೆ, ಚಕ್ಕೋಡನಹಳ್ಳಿ, ಬೀಮನಹಳ್ಳಿ, ಹಂಪಾಪುರ, ಮಾದಾಪುರ, ಕೆ. ಬೆಳ್ತೂರು, ಮನುಗನಹಳ್ಳಿ, ಬಾಚೇಗೌಡನಹಳ್ಳಿ, ಚಿಕ್ಕೆರೆಯೂರು, ಅಣ್ಣೂರು, ಮುಳದಳೂರು, ತುಂಬಸೋಗೆ, ಬಿ. ಮಟಕೆರೆ, ಅಂತರಸಂತೆ, ನೂರಲಕುಪ್ಪೆ, ಡಿ.ಬಿ ಕುಪ್ಪೆ, ಬೀಚನಹಳ್ಳಿ, ಸಾಗರೆ, ಹೆಗ್ಗನೂರು, ಎಂ.ಸಿ.ತೊಳಲು, ಎನ್. ಬೆಳ್ತೂರು. ಎನ್. ಬೇಗೂರು, ಬಿದರಳ್ಳಿ, ಕಲಂಬಾಳು ಹಾಗೂ ಸುತ್ತ ಮುತ್ತಲಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಆಗುವುದಿಲ್ಲ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಸೆಸ್ಕಾಂ ಇಇ ನಾಗೇಶ್ ಮನವಿ ಮಾಡಿದ್ದಾರೆ.
ಕಲ್ಲಳ್ಳಿಯಲ್ಲಿ ನಾಟಕ
ಹುಣಸೂರು: ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹರವೆ ಕಲ್ಲಹಳ್ಳಿಯಲ್ಲಿ ಬಸವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಾ.20ರ ರಾತ್ರಿ 8.30ಕ್ಕೆ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಮಂಡಳಿಯ ಕೆ.ಎಚ್. ರಾಜಣ್ಣ ತಿಳಿಸಿದ್ದಾರೆ.
ನೇಮಕ
ಎಚ್.ಡಿ. ಕೋಟೆ: ಬಿಜೆಪಿ ತಾಲೂಕು ಘಟಕದ ಕಾರ್ಯದರ್ಶಿಯಾಗಿ ಎಂ.ಕೆ. ಕುಮಾರಸ್ವಾಮಿ ಅವರು ಮುಂದಿನ ಮೂರು ವರ್ಷಗಳವರೆಗೆ ನೇಮಕವಾಗಿದ್ದಾರೆ.