ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವೈಭವದ ಗುಂಜಾನರಸಿಂಹ ಸ್ವಾಮಿ ರಥೋತ್ಸವ

Mainashree
Updated On : 18 Mar 2014, 11:47 am

ಟಿ. ನರಸೀಪುರ: ಪುರಾತನ ಪ್ರಸಿದ್ಧ ಶ್ರೀ ಗುಂಜಾನರಸಿಂಹ ಸ್ವಾಮಿಯ ದಿವ್ಯ ಮಹಾರಥೋತ್ಸವವು ಮಂಗಳವಾರ ವೈಭವಯುತವಾಗಿ ನೆರವೇರಿತು.
ಪಟ್ಟಣದ ತ್ರಿವೇಣಿ ಸಂಗಮದ ದಡದಲ್ಲಿರುವ ಶ್ರೀ ಗುಂಜಾನರಸಿಂಹ ಸ್ವಾಮಿಯ ದೇವಾಲಯದ ಆವರಣದಿಂದ ಭಕ್ತಸಾಗರದ ನಡುವೆ ಸಾಗಿದ ರಥೋತ್ಸವವಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. ನೂತನ ದಂಪತಿಗಳು ಹಣ್ಣು ದವನ ಎಸೆದರು.
ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳ ನಡುವೆ ರಥೋತ್ಸವ ನೆರವೇರಿತು. ಮೈಗೆ ಬಣ್ಣ ಹಚ್ಚಿಕೊಂಡ ಯುವಕರು ಭಾವ ಪರವಶರಾಗಿ ಕುಣಿದು ರಥ ಎಳೆದರು. ರಥವು ವಿಶ್ವಕರ್ಮ ಬೀದಿ, ಹಳೆ ಪ್ರಾಥಮಿಕ ಶಾಲೆ ಹಾಗೂ ಅಂಗಡಿ ಬೀದಿ ಮಾರ್ಗದಲ್ಲಿ ಸಂಚರಿಸಿತು. ಭಕ್ತರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಪಾನಕ, ಮಜ್ಜಿಗೆ ಮತ್ತು ಉಪಾಹಾರ ನೀಡಲಾಯಿತು.
ಆಗಮಿಕ ನಾಗರಾಜ ಭಟ್ಟ, ಅರ್ಚಕ ವೈ.ಎನ್. ಸಂಪತ್‌ಕುಮಾರ್, ರಮೇಶ್ ಭಟ್ಟ, ಗೆಜ್ಜಪ್ಪ, ವೆಂಕಟೇಶ್, ಪಾರುಪತ್ತೇಗಾರ್ ವಿ. ನರಸಿಂಹನ್, ತಹಸೀಲ್ದಾರ್ ಸಿ.ಚೌಡಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ. ರಮೇಶ್, ಪಪಂ ಅಧ್ಯಕ್ಷೆ ರತ್ನಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement