ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸುದ್ದಿ ಸಂಕ್ಷೇಪ

Mainashree
Updated On : 18 Mar 2014, 11:48 am

ವೈದ್ಯ ವಿದ್ಯಾರ್ಥಿಗಳ ಶ್ರಮದಾನ
ಮೈಸೂರು: ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಆಯೋಜಿಸಿದ್ದ ರಾಷ್ಟ್ರೀಯ ಯುವ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿದ್ದ ವಿವಿಧ ರಾಜ್ಯಗಳ ಶಿಬಿರಾರ್ಥಿಗಳು ನಗರದ ಮೃಗಾಲಯದಲ್ಲಿ ಶ್ರಮದಾನ ನಡೆಸಿದರು. ಮಂಗಳವಾರ ಸುಮಾರು ಎಂಟು ರಾಜ್ಯಗಳಿಂದ ಆಗಮಿಸಿದ್ದ ಸುಮಾರು 150 ಮಂದಿ ಯುವ ವೈದ್ಯ ವಿದ್ಯಾರ್ಥಿಗಳು ಮೃಗಾಲಯದಲ್ಲಿ ಶ್ರಮದಾನ ನಡೆಸಿ, ಅಪರೂಪದ ಹಣ್ಣಿನ ಮತ್ತು ಔಷಧೀಯ ಮರ ಜಾತಿಗಳ ಸಸಿಗಳನ್ನು ನೆಟ್ಟರು. ಪರಿಸರದ ಬಗೆಗೆ ಪ್ರೀತಿಯನ್ನು ಯುವಕರಲ್ಲಿ ಹೆಚ್ಚಿಸುವ ಮತ್ತು ಪರಿಚಯಿಸುವ ಉದ್ದೇಶದಿಂದ ಬೆಂಗಳೂರಿನ ಮರ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ರಮಾಕಾಂತ್ ಈ ಶಿಬಿರದಲ್ಲಿ ಭಾಗವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಸತ್ಯನಾರಾಯಣ ಭಟ್, ಮೃಗಾಲಯದ ಕಾರ್ಯ ನಿರ್ವಹಣಾ ನಿರ್ದೇಶಕ ಬಿ.ಪಿ. ರವಿ ಇದ್ದರು.
ಕಳ್ಳನ ಬಂಧನ: 6 ಬೈಕ್ ವಶ
ಮೈಸೂರು: ನಗರದ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ, 1.97 ಲಕ್ಷ ಮೌಲ್ಯದ 6 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ತಾಲೂಕು ಬೆಳವಾಡಿ ಅಮೃತೇಶ್ವರನಗರ ನಿವಾಸಿ ರಾಜಣ್ಣ ಎಂಬವರ ಪುತ್ರ ಹಾಗೂ ಚಾಲಕ ವೃತ್ತಿ ಮಾಡಿಕೊಂಡಿರುವ ಮೋಹನ (39) ಬಂಧಿತ ಆರೋಪಿ. ಈತ ವಾಲ್ಮೀಕಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಹೋಗುತ್ತಿದ್ದಾಗ ಪೊಲೀಸರು ಹಿಡಿದು ವಿಚಾರಣೆ ಮಾಡಿದಾಗ ಕಳವು ಮಾಡಿರುವುದು ಒಪ್ಪಿಕೊಂಡಿದ್ದಾನೆ. ಈತ ಹ್ಯಾಂಡಲ್ ಲಾಕ್ ಮಾಡದ ಬೈಕ್‌ಗಳ ವೈರ್‌ಗಳನ್ನು ನೇರ ಸಂಪರ್ಕ ಕಲ್ಪಿಸಿ ಕಳವು ಮಾಡುತ್ತಿದ್ದ ಎಂಬ ಅಂಶ ವಿಚಾರಣೆಯಲ್ಲಿ ಗೊತ್ತಾಗಿದೆ. ಈತ ನೀಡಿರುವ ಮಾಹಿತಿ ಮೇರೆಗೆ ಒಟ್ಟು 6 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement