ಹೊಸಲು ಮಾರಮ್ಮದೇವಿ ಜಾತ್ರಾ ಮಹೋತ್ಸವ
ಹುಣಸೂರು: ಹುಣಸೂರು- ಮೈಸೂರು ಹೆದ್ದಾರಿಯ ಮಲ್ಲಿನಾಥಪುರ ಬಳಿಯ ಹೊಸಲು ಮಾರಮ್ಮದೇವಿ ಜಾತ್ರಾ ಮಹೋತ್ಸವ ಸೋಮವಾರ ವೈಭವದಿಂದ ಜರುಗಿತು. ಅಲ್ಲದೆ ಪ್ರಾಣಿ ಬಲಿಯೂ ಯಾವುದೆ ಅಡೆತಡೆ ಇಲ್ಲದೆ ನಡೆಯಿತು.
ಜಾತ್ರೆಯಲ್ಲಿ ಅಕ್ಕ ಪಕ್ಕದ ಗ್ರಾಮಗಳಿಂದ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು. ದೇವರಿಗೆ ಬೆಳಗ್ಗೆಯಿಂದಲೆ ವಿವಿಧ ಪೂಜೆ ನಡೆಯಿತು. ಮಲ್ಲಿನಾಥಪುರದಿಂದ ಹೊರಟ ಮಾರಮ್ಮಾ ದೇವರ ಮೆರವಣಿಗೆ ಉದ್ದಕ್ಕೂ ಗ್ರಾಮದ ಕುರುಬ ಸಮಾಜದ ಜನರು ಎರಡು ಕಿ.ಮೀ ಹೆದ್ದಾರಿ ಉದ್ದಕ್ಕೂ ಸಾವಿರದ ಒಂದು ಇಡುಗಾಯಿ ಒಡೆದರು.
ಹರಕೆ ಹೊತ್ತಿದ್ದ ಸಾವಿರಾರು ಮಂದಿ ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕುರಿ- ಕೋಳಿ ಬಲಿ ನೀಡಿದರು. ವೃತ್ತ ನಿರೀಕ್ಷಕ ಗಜೇಂದ್ರ ಪ್ರಸಾದ್, ಎಸ್ಐ ಉದಯರವಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.